Select Your Language

Notifications

webdunia
webdunia
webdunia
webdunia

ಅಜಿತ್-ಶಾಲಿನಿ ದಂಪತಿಗೆ ಪುತ್ರ ಭಾಗ್ಯ.. ?!

ಅಜಿತ್-ಶಾಲಿನಿ ದಂಪತಿಗೆ ಪುತ್ರ ಭಾಗ್ಯ.. ?!
, ಮಂಗಳವಾರ, 3 ಮಾರ್ಚ್ 2015 (10:27 IST)
ತಮಿಳು ಚಿತ್ರರಂಗದ ಯಶಸ್ವಿ ನಟ ಅಜಿತ್ ಕುಮಾರ್.ಅವರು ತಮಿಳು ಚಿತ್ರರಂಗದ ಯಶಸ್ವಿ ನಟಿ ಶಾಲಿನಿಯನ್ನು ವಿವಾಹವಾಗಿದ್ದು ಹಳೆಯ ಸಂಗತಿ.  ಅಜಿತ್ ಹಾಗೂ ಶಾಲಿನಿ 1999  ರಲ್ಲಿ  ಅಮರ್ ಕಲಾಂ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆಬಳಿಕ ಈ ಜೋಡಿ ಪ್ರೀತಿಸಿ 2000  ದಲ್ಲಿ ಮದುವೆ ಆದರು ಅವರಿಗೆ ಏಳೂವರೆ ವರ್ಷದ ಅನೌಷ್ಕ ಎನ್ನುವ ಹೆಸರಿನ ಮಗಳಿದ್ದಾಳೆ.   
ಈಗ ಈ ತಾರ ಜೋಡಿ ಬದುಕಲ್ಲಿ ಮತ್ತೋರ್ವ  ಸದಸ್ಯನ ಆಗಮನ ಆಗಿದೆ. ಹೌದು ನಿಮ್ಮ ಎಣಿಕೆ ಸರಿ ಅವರು ಈಗ  ಗಂಡು ಮಗುವಿನ ಪೋಷಕರಾಗಿದ್ದಾರೆ. ಇತ್ತೀಚೆಗಷ್ಟೇ ಅಜಿತ್ ಅವರು ನಟಿಸಿದ್ದ ಯೆನ್ನೈ ಅರಿಂದಾಲ್ ಚಿತ್ರ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ಅನುಷ್ಕ ಮತ್ತು ತ್ರಿಶ ನಟಿಸಿದ್ದರು. ಯಶಸ್ವಿ ಚಿತ್ರಗಳ ಸಾಲಿಗೆ ಸೇರಿರುವ ಯೆನ್ನೈ ಚಿತ್ರದ ಬಳಿಕ ಸ್ವಲ ಕಾಲ ತಮಗೆ ವಿರಾಮ ಬೇಕು ಎಂದು ನಿರ್ಮಾಪಕರ ಬಳಿ ಹೇಳಿದ್ದರು ಅಜಿತ್. ಅದಕ್ಕೆ ಕಾರಣ ಅವರ ಧರ್ಮ ಪತ್ನಿ ಗರ್ಭಿಣಿಯಾಗಿದ್ದು ಹಾಗೂ ಆಕೆಯ ಹೆರಿಗೆಯ ದಿನಗಳು ಸಮೀಪಿಸುತ್ತಿತ್ತು. ಈಗ ತಾಯಿ ಮಗು ಕ್ಷೇಮವಾಗಿದ್ದಾರೆ. 
 
ಮಾರ್ಚ್ ತಿಂಗಳ ಮೊದಲ ದಿನದಲ್ಲಿ ಹೊಸ ಸದಸ್ಯ ಅವರ ಮನೆಗೆ ಬಂದಿದ್ದಾನೆ. ಶಾಲಿನಿ ಸೋಮವಾರ ಮುಂಜಾನೆ ಗಂಡು ಮಗುವಿನ ತಾಯಿ ಆಗಿರುವ ಬಗ್ಗೆ ಅವರು ಮಾಧ್ಯಮಗಳಿಗೆ ತಿಳಿಸಿದರು. ತಾಯಿ ಮಗುವಿನ ಆರೋಗ್ಯ ಸುರಕ್ಷಿತವಾಗಿರಲಿ. ಮಗು ಭಾರತೀಯ ಚಿತ್ರರಂಗದ ತಾರೆಯಾಗಿ ಬೆಳೆಯಲಿ ಎನ್ನುವ ಶುಭ ಹಾರೈಕೆ ಪತ್ರಿಕೆ ಕಡೆಯಿಂದ. 

Share this Story:

Follow Webdunia kannada