Select Your Language

Notifications

webdunia
webdunia
webdunia
webdunia

ಉಪೇಂದ್ರ-ರಾಗಿಣಿ ನಡುವೆ ಕುಚ್ ಕುಚ್ ನಡೀತಾ ಇದೆಯಂತೆ...?

ಉಪೇಂದ್ರ-ರಾಗಿಣಿ ನಡುವೆ ಕುಚ್ ಕುಚ್ ನಡೀತಾ ಇದೆಯಂತೆ...?
, ಬುಧವಾರ, 24 ಡಿಸೆಂಬರ್ 2014 (09:57 IST)
ಇತ್ತೀಚಿನ ದಿನಗಳಲ್ಲಿ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಮತ್ತು ರಾಗಿಣಿ ದ್ವಿವೇದಿ ಅವರ ನಡುವೆ ಕುಚ್ ಕುಚ್ ನಡಿತಾ ಇದೆ. ಹೌದು ಅವರಿಬ್ಬರೂ ಒಟ್ಟಿಗೆ ಎಲ್ಲ ಕಡೆ ಕಾಣಿಸಿ ಕೊಳ್ಳುತ್ತಿದ್ದಾರೆ. ಹಾಗಾದ್ರೆ ಅವರ ನಡುವೆ ಏನೋ ಒಂದು ಕಥೆ ಇದೆ ಹೀಗೆ ನಾವು ಹೇಳೋಕೆ ಆರಂಭ ಮಾಡಿದರೆ ನೀವು ಸಹ ಅದರ ಬಗ್ಗೆ ಬೇರೆ ರೀತಿ ಯೋಚಿಸುವ ಸಾಧ್ಯತೆ ಇದೆ. ಆದ್ದರಿಂದ ನೀವು ಆ ಬಗ್ಗೆ ಬೇರೆ ಯೋಚನೆ ಮಾಡುವ ಮುನ್ನವೇ ಸತ್ಯ ತಿಳಿಸಿ ಬಿಡ್ತಿವಿ, ಈಗ ಮೇಲೆ ಹೇಳಿರುವಂತೆ ಇರುವ ಸಂಗತಿಗಳು ಸತ್ಯಕ್ಕೆ ದೂರವಾದುದು. 
ಅವುಗಳು ಸತ್ಯವಲ್ಲ ರಿಯಲ್ ಬದುಕಲ್ಲಿ,ಆದರೇ ರೀಲ್ ಲೈಫ್ ನಲ್ಲಿ ಅದು  ಸತ್ಯ, ಅಂದರೆ ಅವರ ನಟನೆಯ ಚಿತ್ರ ಶಿವಂ ವಿಷಯದಲ್ಲಿ ಆ ಸಂಗತಿ ಸತ್ಯ. ಆ ಚಿತ್ರದಲ್ಲಿ ಈ ಜೋಡಿಯ ಕೆಮಿಸ್ಟ್ರಿ ಅಷ್ಟೊಂದು ಚೆನ್ನಾಗಿದೆಯಂತೆ. ಬ್ರಾಹ್ಮಣ, ಬಸವಣ್ಣ, ಸಿಂಬಲ್  ಹೀಗೆ ಅನೇಕ ರೀತಿಯಲ್ಲಿ ವಿವಾದಕ್ಕೆ ಈಡಾಗಿದ್ದ ಶ್ರೀನಿವಾಸು ರಾಜು ಅವರ ಚಿತ್ರಕ್ಕೆ ಅಂತಿಮವಾಗಿ ದೊರೆತ ಹೆಸರು ಶಿವಂ. 
 
ಈ ಬಗ್ಗೆ ಯಾವುದೇ ಗಲಾಟೆ ಆಗಿಲ್ಲ ಎನ್ನುವುದು ಸದ್ಯದ ಸತ್ಯ. ಈ ಸಿನಿಮಾದಲ್ಲಿ ಉಪ್ಪಿ ಮತ್ತು ರಾಗಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಸಂಗತಿಯು ಚಿತ್ರದ ಯಶಸ್ಸು ನಿರೀಕ್ಷೆ ಮಾಡುವಂತೆ ಮಾಡಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುವ ಉಪೇಂದ್ರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹೊಸ ಅವತಾರಗಳನ್ನು ಕಂಡು ಖುಷಿ ಪಡುವ ಹುಮ್ಮಸ್ಸಿನಲ್ಲಿದ್ದಾರೆ. ಇದರಲ್ಲಿ ಉಪ್ಪಿ ದ್ವಿಪಾತ್ರಧಾರಿಯಾಗಿದ್ದಾರೆ. 
 

Share this Story:

Follow Webdunia kannada