Webdunia - Bharat's app for daily news and videos

Install App

ಆಲಿಯಾ-ಸಿದ್ಧಾರ್ಥ್ ಮಲ್ಹೋತ್ರಾ ನಡುವೆ ಕುಚ್ ಕುಚ್...?!

Webdunia
ಗುರುವಾರ, 5 ಮಾರ್ಚ್ 2015 (09:59 IST)
ಆಲಿಯಾ ಭಟ್ಟ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಇಬ್ಬರು ಡೇಟಿಂಗ್ ಮಾಡ್ತಾ ಇದ್ದಾರೆ ಎನ್ನುವ ಸುದ್ದಿ ಹರಡಿದೆ ಬಾಲಿವುಡ್ ಪಟ್ಟಣದಲ್ಲಿ. ನಿಜಕ್ಕೂ ಅವರಿಬ್ಬರೂ ಡೇಟಿಂಗ್ ಮಾಡ್ತಾ ಇದ್ದಾರಾ ಅಥವಾ ಇಲ್ಲವೇ ಎನ್ನುವ ಸಂಗತಿ ಯಾರಿಗೂ ಸ್ಪಷ್ಟವಾಗಿಲ್ಲ. ಆದರೂ ಸಹಿತ ಅದರ ಬಗ್ಗೆ ಹರಡಿರುವ ಸುದ್ದಿ ಮಾತ್ರ ಗಮ್ಮತ್ತಾಗಿದೆ. ಅದಕ್ಕೆ ಕಾರಣ ಒಬ್ಬರನ್ನು ಒಬ್ಬರು ಹಿಡಿದು ಕೊಂಡು , ಜೋತು ಬಿದ್ದು ಓಡಾಡುತ್ತಿರುವ ದೃಶ್ಯಗಳು ಈಗ ಎಲ್ಲೆಡೆ ಕಂಡು ಬರುತ್ತಿದ್ದೆ. 
ಸ್ವಲ್ಪ ಸಂಗತಿ ಇದ್ದರೆ ಸಾಕು ಸುದ್ದಿ ಹರಡುವಂತಹ ಈ ಕಾಲದಲ್ಲಿ ಅವರಿಬ್ಬರೂ ಹೀಗೆ ಓಡಾಡಿದರೆ ಏನಾಗ ಬೇಡ ಮಂದಿಗೆ ? ಈಗ ಆ ಎಲ್ಲ ಸಂದೇಹಗಳಿಗೂ ಸಿದ್ಧಾರ್ಥ್ ಮಲ್ಹೋತ್ರ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮಾತ್ರವಲ್ಲ ವರುಣ್ ಧವನ್ ಸಹ ಆಲಿಯಾ ಜೊತೆ ಇದ್ದೇವೆ. ನಾವು ಮೂರು ಜನ ಸ್ನೇಹಿತರು ಆತ್ಮೀಯವಾಗಿ ಓಡಾಡುತ್ತಿದ್ದೇವೆ. ಅದನ್ನು ಹೊರತು ಪಡಿಸಿ ನೀವು ನಿರೀಕ್ಷಿಸಿದಂತೆ ಏನೇನು ಇಲ್ಲ. ಆದ ಕಾರಣ ಸುಖಾ ಸುಮ್ಮನೆ ಕಲ್ಪನೆಗಳನ್ನು ಮಾಡಿಕೊಳ್ಳುವುದನ್ನು ಬಿಟ್ಟು ಬಿಡಿ ಎಂದು ಆಧಾರ ಸಹಿತ ನೇರವಾಗಿ ಹೇಳಿದ್ದಾರೆ ಸಿದ್ಧಾರ್ಥ್. 
 
ಈ ಮುಖಾಂತರ ಸುಮ್ಮನೆ ಹರಡಿದ್ದ ಸುದ್ದಿಗೊಂದು ಜೀವಂತ ಪ್ರತಿಕ್ರಿಯೆ ನೀಡಿದ್ದಾರೆ ಸಿದ್ಧಾರ್ಥ್. ಉತ್ತಮ ಸ್ನೇಹಿತರಾಗಿದ್ದರು ಗಾಸಿಪ್ ಕಾಲಂ ತುಂಬಿಸಿ ಕೊಳ್ಳಲು ಕಾಲು ಬಾಲ ಇಲ್ಲದೆ ಸುದ್ದಿ ಮಾಡುವವರಿಗೆ ಆಗಾಗ ಇಂತಹ ಮುಖಭಂಗ ಆಗುತ್ತದೆ ಎನ್ನುವ ಮಾತನ್ನು ಸಹಿತ ಬಾಲಿವುಡ್ ಮಂದಿ ಹೇಳುತ್ತಿದ್ದಾರೆ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments