Select Your Language

Notifications

webdunia
webdunia
webdunia
webdunia

ಶಕೀಲಾಗೆ ಬೆದರಿಕೆ: ಆಕೆಯ ಚಿತ್ರಗಳಿಗೆ ದೊಡ್ಡವರ ಅಡ್ಡಿ...?!

ಶಕೀಲಾಗೆ ಬೆದರಿಕೆ: ಆಕೆಯ ಚಿತ್ರಗಳಿಗೆ ದೊಡ್ಡವರ ಅಡ್ಡಿ...?!
, ಶನಿವಾರ, 28 ಫೆಬ್ರವರಿ 2015 (10:16 IST)
ಒಂದೊಮ್ಮೆ ಮಲೆಯಾಳಂ ಸೆಕ್ಸ್ ಬಾಂಬ್ ಎನ್ನುವ ಹೆಸರನ್ನು ಪಡೆದ ನಟಿ ಶಕೀಲಾ. ತನ್ನ ಮಾದಕತೆಯ ಮೂಲಕ ಹೀರೋಗಳಿಗೆ ಸೆಡ್ಡು ಹೊಡೆದ ನಟಿ ಶಕೀಲಾ ಈಗ ಅಂತಹ ಪಾತ್ರಗಳಿಗೆ ಈಗ ಎಳ್ಳು ನೀರು ಬಿಟ್ಟು ಈಗ ಸಣ್ಣ ಪುಟ್ಟ ಕ್ಯಾರೆಕ್ಟರ್ ಮಾಡುತ್ತಾ ಇದ್ದಾಳೆ. ಕನ್ನಡ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಪೋಷಕ ಪಾತ್ರದಲ್ಲಿ ಕಂಡು ಬರುತ್ತಿರುವ ಶಕೀಲಾ ಈಗ ರೊಮ್ಯಾಂಟಿಕ್ ಟಾರ್ಗೆಟ್ ಎನ್ನುವ ಹೆಸರಿನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾಳೆ. 
ಟೈಟಲ್‌ಗೆ ತಕ್ಕಂತೆ ರೊಮ್ಯಾಂಟಿಕ್ ಸೀನ್‌ಗಳನ್ನೂ ಹೊಂದಿರುವ ಹೆಣ್ಣು ಮಕ್ಕಳಿಗೆ ಆಗುವ ಅನ್ಯಾಯದ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆಯಂತೆ. ಹೆಣ್ಣುಮಕ್ಕಳ ಬಳಿ ಒಳ್ಳೆಯ ಮಾತುಗಳನ್ನು ಆಡುತ್ತಾ ಅವರ ಬದುಕಿನ ಜೊತೆ ಆಟ ಆಡುವಂತಹ ಬಡಾ ಬಾಬುಗಳ ಬಗ್ಗೆ ಆಕೆ ಸಿನಿಮಾ ನಿರ್ಮಿಸುತ್ತಿದ್ದಾಳೆ. ಅಷ್ಟೇ ಅಲ್ಲದೆ ಈ ರೀತಿ ಮೋಸ ಹೋದ ಹೆಣ್ಣು ಮಗಳು ಯಾವರೀತಿ ಪ್ರತೀಕಾರ ತೀರಿಸಿಕೊಳ್ಳುತ್ತಾಳೆ ಎಂಬುದನ್ನು ಈ ಚಿತ್ರ ತಿಳಿಸುತ್ತದೆಯಂತೆ. ಸಭ್ಯ ಸಮಾಜದ ನಿರ್ಮಾಣ ಮಾಡುವ ಬಗ್ಗೆ ಯಾವ ರೀತಿ ಜಾಗೃತಿ ಮಾಡುತ್ತಾಳೆ ಎನ್ನುವ ಸಂಗತಿ ಈ ಸಿನಿಮಾದಲ್ಲಿ ತೋರಿಸಲಾಗುತ್ತದೆಯಂತೆ.
 
ಅತ್ಯಾಚಾರಕ್ಕೆ ಈಡಾದ ಹೆಣ್ಣುಮಕ್ಕಳು ಪುರುಷರನ್ನು ಯಾವರೀತಿ ಎದುರಿಸುತ್ತಾರೆ ಎನ್ನುವ ಸಂಗತಿಯ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆಯಂತೆ. ಆದರೆ ಈ ಎಲ್ಲಾ ಸಂಗತಿಯು ಸಹಿತ ಓಕೆ, ಆದರೆ ಇಂತಹ ಶಕೀಲಾಳನ್ನು ಯಾರು ಹೆದರಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡುವುದು ಸಹಜ! ತನ್ನ ಬದುಕಲ್ಲಿ ಎದುರಾದ ಅನೇಕ ಸಂಗತಿಗಳ ಬಗ್ಗೆ ಈಕೆ ನೇರಾನೇರವಾಗಿ ಹೇಳುತ್ತಿದ್ದಾಳೆ ಎನ್ನಲಾಗಿರುವ ಈ ಚಿತ್ರದಲ್ಲಿ ತಮ್ಮ ಮಾನವೆಲ್ಲಿ ಹರಾಜಾಗಿ ಬಿಡುತ್ತದೆಯೋ ಎನ್ನುವ ಭಯ ಕಾಡುತ್ತಿದೆ ಸೊ ಕಾಲ್ಡ್ ದೊಡ್ಡವರಿಗೆ ಎನ್ನುವ ಸುದ್ದಿ ಇದೆ. 
 
ಇದರಿಂದ ಹೆದರಿದ ದೊಡ್ಡವರು ಆಕೆಯು ಈ ಚಿತ್ರದ ಮುಂದುವರಿಕೆಯನ್ನು ನಿಲ್ಲಿಸಲು ಹೇಳುತ್ತಿದ್ದಾರೆ, ಜೊತೆಗೆ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಇದರಲ್ಲಿ ಸಿನಿಮಾ ಮಂದಿ ಮಾತ್ರವಲ್ಲ, ರಾಜಕೀಯ ನಾಯಕರುಗಳು ಸಹಿತ ಸೇರ್ಪಡೆ ಆಗಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಆಕೆ ಹೆದರಿ ಆ ಚಿತ್ರದ ಕೆಲಸ ಅರ್ಧಕ್ಕೆ ನಿಲ್ಲಿಸುತ್ತಾಳ ಅಥವಾ ನೋಡೇ ಬಿಡೋಣ ಅಂತ ಚಿತ್ರ ಜನರ ಮುಂದೆ ತರುತ್ತಾಳಾ!

Share this Story:

Follow Webdunia kannada