Select Your Language

Notifications

webdunia
webdunia
webdunia
webdunia

ಧಾರವಾಹಿ ಕಡೆಗೆ ತಿರುಗಿದ ನಟ ಸೊಹೈಲ್ ಖಾನ್

ಧಾರವಾಹಿ ಕಡೆಗೆ ತಿರುಗಿದ ನಟ ಸೊಹೈಲ್ ಖಾನ್
, ಶುಕ್ರವಾರ, 26 ಡಿಸೆಂಬರ್ 2014 (09:27 IST)
ಬೆಳ್ಳಿ ತೆರೆಯ ಬಗ್ಗೆ   ಅನೇಕ ಕನಸುಗಳನ್ನು ಹೊತ್ತು ಬಂದಿರ್ತಾರೆ ಕಲಾವಿದರು. ಅವರಲ್ಲಿ ಕೆಲವರನ್ನು ಮಾತ್ರ ಅದು ಪೋಷಿಸಿ ಕಾಪಾಡುತ್ತದೆ. ಸಲ್ಮಾನ್ ಖಾನ್ ಅವರ ಕುಟುಂಬದಲ್ಲಿ ಸಲ್ಮಾನ್ ಗ್ರಾಫ್ ಚನ್ನಾಗಿದೆ, ಆದರೆ ಆತನ ಸಹೋದರ ಸೊಹೈಲ್ ಖಾನ್ಗೆ ಮಾತ್ರ ಅದ್ಯಾಕೋ ಅದೃಷ್ಟ ಕೂಡಿ ಬರಲಿಲ್ಲ. 
ನಟನಿಗೆ ನಟಿಸುವ ತುಡಿತ ಸದಾ ಇದ್ದೇ ಇರುತ್ತದೆ, ಅಂತವರಿಗೆ  ವರವಾಗಿದೆ ಕಿರುತೆರೆ. ಈಗ ಸೊಹೈಲ್ ಖಾನ್ಗೂ ಸಹಿತ ಕಿರಿತೆರೆ ಆಪ್ತ ಆಗುವ ಕಾಲ ಸನ್ನಿಹಿತವಾಗಿದೆ. ಅವರು ಈಗ ಧಾರವಾಹಿ ಒಂದರಲ್ಲಿ ನಟಿಸುತ್ತಿದ್ದಾರೆ. ಈ ಧಾರವಾಹಿಯನ್ನು ವಿಕಾಸ್ ಬಹಳ ಅವರು ನಿರ್ದೇಶಿಸುತ್ತಿದ್ದಾರೆ. 
 
ಮುಂದಿನವರ್ಷದಲ್ಲಿ ಫೆಬ್ರವರಿ ತಿಂಗಳಲ್ಲಿ ಈ ಧಾರವಾಹಿ ಜನರ ಮುಂದೆ ಬರುತ್ತಿದೆ. ಒಂದು ಕುಟುಂಬದಲ್ಲಿ ನಡೆಯುವ ಕಥಾ ಹಂದರ ಹೊಂದಿದ್ದು, ಇದರಲ್ಲಿ ಸೊಹೈಲ್ ಬಾಲಿವುಡ್ ಹೀರೋ ಆಗಲು  ಪ್ರಯತ್ನ ಪಡುತ್ತಿರುವ ಯುವಕನ ಪಾತ್ರಧಾರಿ ಆಗಿದ್ದಾರೆ.ವಿಕಾಸ್ ನನಗೆ ಉತ್ತಮ ಗೆಳೆಯ, ಆತ ಉತ್ತಮ  ಸ್ಕ್ರಿಪ್ಟ್ ಸಮೇತ ಬಂದು ನನ್ನನ್ನು ಕೇಳಿದರೆ ಇಲ್ಲ ಎನ್ನಲಾಗದೆ ಸಮ್ಮತಿಸಿದ್ದೇನೆ ಎಂದು ಹೇಳಿದ್ದಾರೆ. ಅಂತೂ ಕಿರುತೆರೆಯು ಸಹ ಫಳಫಳ ಎಂದು ಹೊಳೆಯುತ್ತಿದೆ ಬಾಲಿವುಡ್ ಕಲಾವಿದರಿಂದ.ಹಿರಿತೆರೆಯಲ್ಲಿ ಕಳೆದುಕೊಂಡದ್ದು ಕಿರುತೆರೆಯಲ್ಲಿ ಸೊಹೈಲ್ ಪಡೆಯಲಿ. 

Share this Story:

Follow Webdunia kannada