Select Your Language

Notifications

webdunia
webdunia
webdunia
webdunia

ಸೋಡಾಬುಡ್ಡಿ ಸಿನಿಮಾದ ಸ್ಪೆಷಲ್ ಟೀಸರ್ ರಿಲೀಸ್

ಸೋಡಾಬುಡ್ಡಿ ಸಿನಿಮಾದ ಸ್ಪೆಷಲ್ ಟೀಸರ್ ರಿಲೀಸ್
, ಮಂಗಳವಾರ, 3 ನವೆಂಬರ್ 2015 (12:26 IST)
ಸ್ಯಾಂಡಲ್ ವುಡ್ ನಲ್ಲಿ ಇದೀಗ ಹೊಸಬರ ಅಲೆ. ಈಗಾಗಲೇ ಹೊಸಬರ ಅನೇಕ ಸಿನಿಮಾಗಳು ಚಂದನವನದಲ್ಲಿ ಭರ್ಜರಿ ಯಶಸ್ವಿ ಕಂಡಿವೆ. ಇದೀಗ ಹೊಸಬರ ತಂಡವೊಂದು ಹೊಸ ಪ್ರಯೋಗದೊಂದಿಗೆ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದೆ. ಅದೇ ಸೋಡಾಬುಡ್ಡಿ. ಮೊನ್ನೆಯಷ್ಟೇ ಸೋಡಾಬುಡ್ಡಿ ಸಿನಿಮಾದ ಸ್ಪೆಷಲ್ ಟೀಸರ್ ರಿಲೀಸ್ ಆಗಿದೆ. 
ಹೊಸಬರು ಹಾಗೂ ಹೊಸತನವಿರೋ ಈ ಸಿನಿಮಾ ಪಡ್ಡೆ ಹುಡುಗರಿಗಾಗಿಯೇ ವಿಶೇಷವಾಗಿ ನಿರ್ಮಿಸಿದ ಸಿನಿಮಾವಂತೆ. ಸಿನಿಮಾವನ್ನು  ಜ್ಯೋತಿರಾವ್ ಮೋಹಿತ್ ನಿರ್ದೇಶಿಸಿದ್ದಾರೆ. ಜ್ಯೋತಿರಾವ್ ಅವರಿಗೂ ಇದು ಮೊದಲ ಸಿನಿಮಾ.ಈಗಷ್ಟೇ ತನ್ನ ಟೀಸರ್ ರಿಲೀಸ್ ಮಾಡಿರುವ ಸಿನಿಮಾ ತಂಡ ಆದಷ್ಟು ಬೇಗ ಆಡಿಯೋ ಲಾಂಚ್ ಮಾಡಲಿದೆ.
 
ಅಂದ್ಹಾಗೆ ಸೋಡಾ ಬುಡ್ಡಿ ಸಿನಿಮಾದಲ್ಲಿ ಮೊದಲ ಬಾರಿಗೆ ಉತ್ಪಲ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರಿಗೆ ನಾಯಕರಾಗಿ ಅನುಷಾ ಹಾಗೂ ಖುಷಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಖುಷಿಗಿದು ಎರಡನೇ ಸಿನಿಮಾವಾಗಿದ್ರೆ, ಉಳಿದವರಿಗೆ ಇದು ಮೊದಲ ಸಿನಿಮಾ. ಸಿನಿಮಾಗಾಗಿ ಉತ್ಪಲ್ ತುಂಬಾನೇ ವರ್ಕ್ ಔಟ್ ಮಾಡಿದ್ದಾರಂತೆ ಇನ್ನು ಅನುಷಾ ಈಗಾಗಲೇ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಇದೇ ತಿಂಗಳಲ್ಲಿ ಸಿನಿಮಾ ಪ್ರೇಕ್ಷಕರೆದುರಿಗೆ ಬರಲಿದೆ.

Share this Story:

Follow Webdunia kannada