Select Your Language

Notifications

webdunia
webdunia
webdunia
webdunia

ಸ್ನೇಕ್ ನಾಗ ಮಾತಾಡಲು ಸಿದ್ಧ ಇನ್ನು ಸ್ವಲ್ಪ ದಿನದಲ್ಲೇ ನೀವು ಕೇಳ್ತಿರಿ

ಸ್ನೇಕ್ ನಾಗ ಮಾತಾಡಲು ಸಿದ್ಧ ಇನ್ನು ಸ್ವಲ್ಪ ದಿನದಲ್ಲೇ ನೀವು ಕೇಳ್ತಿರಿ
, ಗುರುವಾರ, 28 ಆಗಸ್ಟ್ 2014 (10:28 IST)
ಯೋಗೇಶ್  ಮತ್ತು  ಹಿತಾಚಂದ್ರಶೇಖರ್ ನಟಿಸುತ್ತಿರುವ ಹಿರಿಯ ಪತ್ರಕರ್ತೆ ಪ್ರತಿಭಾ ನಂದಕುಮಾರ್ ಅವರ ನಿರ್ದೇಶನದ   ಮಾಧವ ಮೂವೀಸ್ ಲಾಂಛನದಲ್ಲಿ ಗೋಪಾಲ ಕುಷ್ಠಗಿ ಅವರು ನಿರ್ಮಿಸುತ್ತಿರುವ  ಸ್ನೇಕ್ ನಾಗ ಚಿತ್ರದ  ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.  ಮುವ್ವತ್ತೈದು  ದಿನಗಳ  ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.


 
ಯೋಗೇಶ್ ,ಹಿತಾಚಂದ್ರಶೇಖರ್ ಜೊತೆಗೆ  ಗಿರೀಶ್ ಕಾರ್ನಾಡ್, ಸಿಹಿಕಹಿ ಚಂದ್ರು, ಕರಿಸುಬ್ಬು, ಕ್ರಿಶ್, ಅಪೇಕ್ಷ, ಪಾಯಲ್ ಗುಪ್ತ ಮುಂತಾದವರು ನಟಿಸುತ್ತಿದ್ದಾರೆ. 
 
ಉಮಾರಾವ್ ಅವರು ಬರೆದಿರುವ ಕಥೆಗೆ ಪ್ರತಿಭಾನಂದಕುಮಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಪ್ರತಿಭಾ  ಅವರೇ ಸಂಭಾಷಣೆಯ  ಹೊಣೆ ಹೊತ್ತಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಸುರೇಶ್ ಸಂಕಲನ, ಅದ್ವೈತ ಛಾಯಾಗ್ರಹಣ ವಸಂತ ಕುಲಕರ್ಣಿ ಕಲಾ ನಿರ್ದೇಶನ, ಎನ್.ಕೆ.ಲೀನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು, ಯೋಗರಾಜ್ ಭಟ್,  ಗೋಪಾಲ ವಾಜಪೇಯಿ ಹಾಗೂ ಪ್ರತಿಭಾನಂದಕುಮಾರ್  ಹಾಡುಗಳನ್ನು ಬರೆದಿದ್ದಾರೆ.

Share this Story:

Follow Webdunia kannada