Webdunia - Bharat's app for daily news and videos

Install App

ಸ್ಮೈಲ್ ರಾಜಾ ಚಿತ್ರದ ನಿರ್ದೇಶಕ ಹರೀಶ್ ಅರೆಸ್ಟ್

Webdunia
ಭಾನುವಾರ, 30 ಜುಲೈ 2017 (14:20 IST)
ಹಣಕಾಸಿನ ವಿವಾದದಲ್ಲಿ ಹಲ್ಲೆ ಮಾಡಲು ರೌಡಿಗಳಿಗೆ ಸುಪಾರಿ ನೀಡಿದ್ದ ಸ್ಮೈಲ್ ರಾಜಾ ಚಿತ್ರದ ನಿರ್ದೇಶಕ ಹರೀಶನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
 
ನಿರ್ದೇಶಕ ಹರೀಶ್ ನಿರ್ಮಿಸುತ್ತಿದ್ದ ಚಿತ್ರದ ನಟನ ಆತ್ತೆಯ ಮಗಳ ಬಳಿ 25 ಲಕ್ಷ ರೂಪಾಯಿ ಸಾಲ ಮಾಡಿದ್ದ. ಚಿತ್ರ ಬಿಡುಗಡೆಯಾದ ನಂತರ ನಟನ ಅತ್ತೆಯ ಮಗಳ ಪರವಾಗಿ ಅಶೋಕ್ ಎನ್ನುವವರು ನಿರ್ದೇಶಕ ಹರೀಶ್‌ನಿಗೆ ಸಾಲ ಹಿಂದಿರುಗಿಸುವಂತೆ ಕೋರಿದ್ದಾರೆ.
 
ಆದರೆ ಹರೀಶ್, ನಟ ವಿನೋದ್ ಪ್ರಭಾಕರ್ ಅವರೊಂದಿಗೆ ಚಿತ್ರ ಮಾಡಿದ ನಂತರ ಹಣ ನೀಡುವುದಾಗಿ ಹೇಳಿದ್ದಾರೆ. ಆದರೆ, ಪದೇ ಪದೇ ಹಣ ಹಿಂದಿರುಗಿಸುವಂತೆ ಅಶೋಕ್ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹರೀಶ್ ರೌಡಿಗಳಿಗೆ  2 ಲಕ್ಷ ರೂಪಾಯಿಗಳ ಸುಪಾರಿ ನೀಡಿದ್ದಾರೆ.
 
ಕಳೆದ ಎರಡು ದಿನಗಳ ಹಿಂದೆ ರೌಡಿಗಳು ಅಶೋಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 
ದೂರಿನ ತನಿಖೆ ನಡೆಸಿದ ಪೊಲೀಸರು ಆರೋಪಿ ನಿರ್ದೇಶಕ ಹರೀಶ್ ಮತ್ತು ಅವರ ಗ್ಯಾಂಗ್‌ನ ಸದಸ್ಯರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಮೇಲಿನ ದಾಳಿಗೆ ನಟ ಪ್ರಕಾಶ್ ರಾಜ್‌ ಖಂಡನೆ, ವಿಡಿಯೋ

ಸು ಫ್ರಮ್ ಸೋ ಸಿನಿಮಾ ಕೊನೆಗೂ ಮಾಡಿತು ಆ ದಾಖಲೆ

ಸುಪ್ರೀಂ ಆದೇಶದ ಆತಂಕದ ಬೆನ್ನಲ್ಲೇ ನಾಡದೇವಿಯ ಮೊರೆ ಹೋದ ದರ್ಶನ್‌ ತೂಗುದೀಪ್‌

ನಾನು ಒಬ್ಬಂಟಿ ಪೋಷಕಿ, ನನಗೆ ಮಗಳಿದ್ದಾಳೆ: ಜಾಮೀನು ರದ್ದು ಮಾಡಬೇಡಿ ಎಂದ ಪವಿತ್ರಾ

ಮುಂದಿನ ಸುದ್ದಿ
Show comments