Select Your Language

Notifications

webdunia
webdunia
webdunia
webdunia

ಲವ್ಲಿ ಗರ್ಲ್ ಶ್ವೇತ ಶ್ರೀವಾತ್ಸವ್ ಮನಸ್ಸು ಈಗ ನಿರ್ದೇಶನದತ್ತ ?

ಲವ್ಲಿ ಗರ್ಲ್  ಶ್ವೇತ ಶ್ರೀವಾತ್ಸವ್ ಮನಸ್ಸು ಈಗ ನಿರ್ದೇಶನದತ್ತ ?
, ಬುಧವಾರ, 22 ಅಕ್ಟೋಬರ್ 2014 (10:24 IST)
ಕನ್ನಡ ಚಿತ್ರರಂಗದ ಭರವಸೆಯ ತಾರೆ ಶ್ವೇತಾ ಶ್ರೀವಾತ್ಸವ್. ಆಕೆ ಧಾರಾವಾಹಿಗಳ ಮೂಲಕ ಬಣ್ಣ ಹಚ್ಚಿದರೂ, ಆನಂತರ ಗೆದ್ದಿದ್ದು ಕನ್ನಡ ಚಿತ್ರರಂಗದಲ್ಲಿ. ಈಗ ಹಿರಿಯ ಪತ್ರಕರ್ತ -ನಿರ್ದೇಶಕ ಸದಾಶಿವ್ ಶೆಣೈ ಅವರ ನಿರ್ದೇಶನದ ಪ್ರಾರ್ಥನೆ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದಾರೆ ಈ ಮುದ್ದಾದ ಚೆಲುವೆ.

ಕನ್ನಡ ಚಿತ್ರರಂಗದಲ್ಲಿ ತನಗೊಂದು ಸ್ಥಾನ ಪಡೆದಿರುವ ಶ್ವೇತಾಗೆ ಈಗ ನಿರ್ದೇಶನ ಮಾಡುವ ಆಶಯ ಉಂಟಾಗಿದೆ. ಆ ದಿಕ್ಕಿನಲ್ಲಿ ಯೋಚಿಸುತ್ತಿದ್ದಾರೆ.ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಎನ್ನುವ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಅಭಿನಯಿಸಿ ಅಮೋಘವಾದ ಹೆಸರು ಗಳಿಸಿದ್ದ ಈ ನಟಿಯು ಒಳ್ಳೆಯ ಕಥೆ ಸಿಕ್ಕರೆ ತಾನು ನಿರ್ದೇಶನ ಮಾಡುವುದಾಗಿ ಹೇಳಿದ್ದಾರೆ. 
 
ತನ್ನ ಕೈಲಿ ಇರುವ ಪ್ರಾಜೆಕ್ಟ್‌ಗಳ ಕೆಲಸ ಪೂರ್ಣ ಆದ ಬಳಿಕ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುವುದಕ್ಕೆ ಅವರು ಆದ್ಯತೆ ನೀಡುತ್ತಾರಂತೆ. ಈಕೆಯ ಜೊತೆ ನಟಿಸಿದ್ದ ಹೀರೋ ರಕ್ಷಿತ್ ಶೆಟ್ಟಿ ಸಹ ನಿರ್ದೇಶಕರಾಗಿ ಬದಲಾಗಿದ್ದಾರೆ, ಅವರ ನಿರ್ದೇಶನದ ಚಿತ್ರ ಉಳಿದವರು ಕಂಡಂತೆ. ಈ ವಾರ ಶ್ವೇತ ನಟನೆಯ ಬಹು ನಿರೀಕ್ಷಿತ ಚಿತ್ರ ಫೇರ್ ಅಂಡ್ ಲವ್ಲಿ ಬಿಡುಗಡೆ ಆಗುತ್ತಿದೆ. ಒಟ್ಟಾರೆ ಕೇವಲ ನಟನೆ ಮಾತ್ರವಲ್ಲ ನಿರ್ದೇಶನದ ಕಡೆಗೂ ಗಮನ ನೆಟ್ಟು ತಾನು ತುಂಬಾ ಭಿನ್ನ ಎನ್ನುವುದನ್ನು ಸಾಬೀತು ಮಾಡಲು ಹೊರಟಿದ್ದಾರೆ ಶ್ವೇತ.

Share this Story:

Follow Webdunia kannada