Select Your Language

Notifications

webdunia
webdunia
webdunia
webdunia

ತೆಲುಗು ಚಿತ್ರರಂಗದತ್ತ ಕನ್ನಡದ ಸಿಂಪಲ್ ಹುಡುಗಿ ಶ್ವೇತ ಶ್ರೀವಾತ್ಸವ್ ಪಯಣ

ತೆಲುಗು ಚಿತ್ರರಂಗದತ್ತ ಕನ್ನಡದ ಸಿಂಪಲ್ ಹುಡುಗಿ ಶ್ವೇತ ಶ್ರೀವಾತ್ಸವ್ ಪಯಣ
, ಶುಕ್ರವಾರ, 31 ಅಕ್ಟೋಬರ್ 2014 (09:51 IST)
ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭಾವಂತೆ ಸುಂದರಿ ಶ್ವೇತ ಶ್ರೀವಾತ್ಸವ್ ಅವರ ಫೇರ್ ಅಂಡ್ ಲವ್ಲಿ ಕಳೆದವಾರ ಬಿಡುಗಡೆ ಆಯಿತು. ಪಾತ್ರಗಳ ವಿಷಯದಲ್ಲಿ ತುಂಬಾ ಚೂಸಿ ಆಗಿರುವ ಈ ಚೆಲುವೆ ಮಾಡಿರುವ ಚಿತ್ರಗಳು ಬೆರಳೆಣಿಕೆಯಷ್ಟು. ಆದರೂ ಸಹಿತ ಆ ಚಿತ್ರಗಳಲ್ಲಿ ಆಕೆಯ ಪಾತ್ರವನ್ನು ಜನರ ಮನದಲ್ಲಿ ನಿಂತಿದೆ.

ಶ್ವೇತ ಈಗ ತೆಲುಗು ಚಿತ್ರರಂಗದ ಕಡೆಗೆ ನಡೆದಿದ್ದಾರೆ. ಅರ್ಥಾತ್ ಆಕೆಗೆ ಅಲ್ಲಿ ಈಗ ನಟಿಸಲು ಕರೆ ಬಂದಿದೆ. ಈ ಮೊದಲು ಸಹ ಶ್ವೇತಾಗೆ  ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಕರೆ ಬಂದಿತ್ತು. ಆದರೆ ಅಲ್ಲಿ ನಟಿಸಲು ಆಕೆ ಇಷ್ಟ ಪಡದೆ ಬಂದ ಅವಕಾಶಗಳನ್ನು ತಿರಸ್ಕರಿಸಿದ್ದಳು. ಆದ್ರೆ ಈಗ ತೆಲುಗು ಚಿತ್ರದಲ್ಲಿ ನಟಿಸಲು ಓಕೆ ಎಂದಿದ್ದಾಳೆ ಈ ಭಾಮೆ. 
 
ಗೋದಾವರಿ ಪ್ರಾಜಕ್ಟ್ ನಲ್ಲಿ ಮುಳುಗಿ ಹೋದ ಅನೇಕ ಹಳ್ಳಿಗಳಲ್ಲಿ ಒಂದು ಹಳ್ಳಿಯ ಧೀರ ಮಹಿಳೆಯ ಪಾತ್ರಧಾರಿಯಾಗಿ ಶ್ವೇತ ತೆಲುಗು ಮಂದಿಯನ್ನು ರಂಜಿಸಲಿದ್ದಾಳೆ. ಈ ಚಿತ್ರ ನವೆಂಬರ್ ತಿಂಗಳ 16  ರಿಂದ ಶೂಟಿಂಗ್ ಆರಂಭ ಆಗುತ್ತದೆ. ಶ್ವೇತ ಸಾಮಾನ್ಯವಾಗಿ ನಟಿಸಿದ ಎಲ್ಲಾ ಪಾತ್ರಗಳು ಅತ್ಯಂತ ಗಮನ ಸೆಳೆದಿದೆ. ಈ ಚಿತ್ರದಲ್ಲೂ ಸಹಿತ ಅಂತಹದ್ದೇ ಪಾತ್ರವಿದೆ. ಇದನ್ನು ನಿಶಾಂತ್ ಅವರು ನಿರ್ದೆಶೀಸುತ್ತಿದ್ದಾರೆ. ಈ ಚಿತ್ರದ ಗೆಲುವಿನ ಅಡಿಯಲ್ಲಿ ಶ್ವೇತ ಅವರ ತೆಲುಗು ಭವಿಷ್ಯ ನಿಂತಿದೆ. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಚಿತ್ರದ ಈ ಚೆಲುವೆಯ ಫೇರ್ ಅಂಡ್ ಲವ್ಲಿ ಚಿತ್ರ ಬಾಕ್ಸಾಫೀಸಲ್ಲಿ ಒಳ್ಳೆಯ ಶಬ್ದ ಮಾಡುತ್ತಿದೆ.

Share this Story:

Follow Webdunia kannada