Webdunia - Bharat's app for daily news and videos

Install App

ನಮ್ ಭಾಷೆಗೋಸ್ಕರ ಪ್ರಾಣ ಕೊಡಲೂ ಸಿದ್ಧ: ಶಿವರಾಜ್ ಕುಮಾರ್

Webdunia
ಸೋಮವಾರ, 20 ಡಿಸೆಂಬರ್ 2021 (09:01 IST)
ಬೆಂಗಳೂರು: ಬೆಳಗಾವಿಯಲ್ಲಿ ಕನ್ನಡ ಬಾವುಟ ಸುಟ್ಟು ಪುಂಡಾಟ ಮೆರೆದ ಎಂಇಎಸ್ ಕಾರ್ಯಕರ್ತರ ಉದ್ಧಟತನದ ವಿರುದ್ಧ ನಟ ಶಿವರಾಜ್ ಕುಮಾರ್ ಗರಂ ಆಗಿ ಮಾತನಾಡಿದ್ದಾರೆ.

ನಮ್ಮ ಧ್ವಜ ಸುಟ್ಟರೆ ನಮ್ಮ ತಾಯಿಯನ್ನೇ ಸುಟ್ಟಂತೆ. ತಾಯಿಗೇನಾದರೂ ಆದರೆ ಸುಮ್ಮನಿರಕ್ಕಾಗುತ್ತಾ? ಹೋರಾಟ ಮಾಡಕ್ಕೆ ಸಿದ್ಧ. ನಂಗೀಗ 60 ವರ್ಷ ಆಯ್ತು. ಇಷ್ಟು ದಿನ ಬೆಳೆಸಿದ್ದೀರಾ. ಒಂದು ವೇಳೆ ಇದರಿಂದಲೇ ನನ್ನ ಪ್ರಾಣ ಹೋಗುತ್ತೆ ಅಂದರೆ ನಾನು ಭಾಷೆಗೋಸ್ಕರ ಪ್ರಾಣ ಕೊಡಲೂ ಸಿದ್ಧ ಎಂದು ಗುಡುಗಿದ್ದಾರೆ.

ಬಡವ ರಾಸ್ಕಲ್ ಸಿನಿಮಾ ಈವೆಂಟ್ ನಲ್ಲಿ ಗರಂ ಆಗಿ ಮಾತನಾಡಿದ ಶಿವಣ್ಣ ನಾವು ಎಲ್ಲಾ ಭಾಷೆಯ ಸಿನಿಮಾನೂ ನೋಡ್ತೀವಿ, ಗೌರವಿಸುತ್ತೇವೆ. ಹಾಗಂತ ನಮಗೆ ನಮ್ಮ ಭಾಷೆ ಎಂದರೆ ಅಭಿಮಾನವಿಲ್ಲ ಎಂದರ್ಥವಲ್ಲ. ಆದರೆ ನಮ್ಮ ಭಾಷೆ ಅಭಿಮಾನದಿಂದ ಇನ್ನೊಬ್ಬರಿಗೆ ಅವಮಾನ ಮಾಡಬಾರದು’ ಎಂದು ಶಿವಣ್ಣ ಖಡಕ್ ಆಗಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಧ್ರುವ ವಿಕ್ರಮ್ ಜತೆಗಿನ ಬ್ರೇಕಪ್ ವದಂತಿ ಬಗ್ಗೆ ಮೌನ ಮುರಿದ ನಟಿ ಅನುಪಮಾ ಪರಮೇಶ್ವರನ್

ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಗೆ ಡಬಲ್‌ ಧಮಾಕಾ: ರಾಮಾಯಾಣ ಟ್ರೈಲರ್‌ ಆಯ್ತು, ಈಗ ಟಾಕ್ಸಿಕ್‌ ಸರದಿ

ಬಿಗ್​​ಬಾಸ್ ರಿಯಾಲಿಟಿ ಶೋ ಮೊದಲ ಪ್ರೋಮೊ ಬಿಡುಗಡೆ: ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ ಸುದೀಪ್‌

ಬೆಂಕಿಗೆ ತುಪ್ಪ ಸುರಿಯುವುದನ್ನು ನಿಲ್ಲಿಸಿ: ಹೃತಿಕ್‌ ಫೋಸ್ಟ್‌ಗೆ ಖಾರವಾಗಿ ಉತ್ತರಿಸಿದ ಕಂಗನಾ ರನೌತ್

ಟಾಕ್ಸಿಕ್ ಸಿನಿಮಾ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್‌, ಯಶ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments