Select Your Language

Notifications

webdunia
webdunia
webdunia
webdunia

ಶೃತಿ ಹಾಸನ್‌ಗೆ ಅಪ್ಪನ ಜೊತೆ ನಟಿಸುವ ಆಸೆಯಂತೆ

ಶೃತಿ ಹಾಸನ್‌ಗೆ ಅಪ್ಪನ ಜೊತೆ ನಟಿಸುವ ಆಸೆಯಂತೆ
, ಬುಧವಾರ, 1 ಜುಲೈ 2015 (10:02 IST)
ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿರುವ ನಾಯಕ ನಟ ವಿಶ್ವನಾಯಕ  ಕಮಲ್ ಹಾಸನ್. ಅವರ ಮಗಳು ರೂಪಸಿರಿ ಶ್ರುತಿ ಹಾಸನ್. ಆರಂಭಿಕ ಹಂತದಲ್ಲಿ ಆಕೆಗೆ ಯಶಸ್ಸು ಕೈ ಹಿಡಿಯದೆ ಹೋದರು ಸಹ ಪವನ್ ಕಲ್ಯಾಣ್ ಅವರ ಜೊತೆ ಗಬ್ಬರ್ ಸಿಂಗ್  ಚಿತ್ರದಲ್ಲಿ ನಟಿಸಿದ ಬಳಿಕ ತಾರ ಬದುಕು ಬದಲಾಯಿತು. ಈಗ ಆಕೆ ತಮಿಳು , ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಹೆಸರು ಗಳಿಸಿದ ನಟಿಯಾಗಿದ್ದಾರೆ. 
ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಶ್ರುತಿ ಹಾಸನ್ ತನ್ನ ಮನದಲ್ಲಿರುವ ಮಾತನ್ನು ಎಲ್ಲರ ಮುಂದೆ ಹೇಳಿದ್ದಾರೆ. ಆಕೆಗೆ ತನ್ನ ತಂದೆ ಕಮಲ್ ಅವರ ಜೊತೆ ನಟಿಸುವ ಆಸೆ ಇದೆಯಂತೆ. ಆ ದಿನಕ್ಕಾಗಿ ತಾನು ಕಾಯುತ್ತಿರುವುದಾಗಿ ಹೇಳಿದ್ದಾರೆ. ಅಂತಹ ಒಂದು ದಿನ ಬಂದೆ ಬರುತ್ತದೆ, ಒಳ್ಳೆಯ ಕಥೆ ದೊರೆತರೆ ಅದರಲ್ಲಿ ತನಗೊಂದು ಚಾನ್ಸ್ ನೀಡುವಂತೆ ಕೇಳಬೇಕೆಂದುಕೊಂಡಿದ್ದೇನೆ ಎಂದು ತನ್ನ ಮನದಲ್ಲಿರುವುದನ್ನು ಎಲ್ಲರ ಮುಂದೆ ಹೇಳಿದ್ದಾರೆ ಶ್ರುತಿ. ಪ್ರಸ್ತುತ ಆಕೆ ಮಹೇಶ್ ಬಾಬು ಅವರ ಜೊತೆ ಶ್ರೀಮಂತುಡು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರುತಿ ಕನಸನ್ನು ನಿರ್ದೇಶಕ-ನಿರ್ಮಾಪಕ-ಕಥೆಗಾರ ನೆರವೇರಿಸಲಿ. 

Share this Story:

Follow Webdunia kannada