Select Your Language

Notifications

webdunia
webdunia
webdunia
webdunia

ಎಯಿಡ್ಸ್ ನಿಯಂತ್ರಣ ಪ್ರಚಾರಕ್ಕೆ ಶ್ರುತಿ ಹಾಸನ್ ಸಮ್ಮತಿ

ಎಯಿಡ್ಸ್ ನಿಯಂತ್ರಣ ಪ್ರಚಾರಕ್ಕೆ ಶ್ರುತಿ ಹಾಸನ್ ಸಮ್ಮತಿ
, ಗುರುವಾರ, 18 ಡಿಸೆಂಬರ್ 2014 (09:41 IST)
ಪ್ರಾಣವನ್ನೇ ತೆಗೆಯುವಂತಹ ಕಾಯಿಲೆಗಳಲ್ಲಿ ಎಯಿಡ್ಸ್ ಸಹ ಒಂದಾಗಿದೆ. ಈ ಕಾಯಿಲೆಯ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಚಾರ ಕರ್ತೆಯಾಗಲು ನಟಿ  ಶ್ರುತಿ ಹಾಸನ್ ಹಸಿರು ನಿಶಾನೆ ತೋರಿದ್ದಾಳೆ. ಆಕೆ ಈಗ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳ ಬ್ಯುಸಿಯೆಸ್ಟ್ ತಾರೆ. ತನ್ನ ಬಿಡುವಿಲ್ಲದ ಶೂಟಿಂಗ್‌ಗಳ ಜೊತೆಗೆ ಈ ಸಂಗತಿಗೂ ಸಹಿತ ಆದ್ಯತೆ ನೀಡಿದ್ದಾಳೆ. ಎಯಿಡ್ಸ್ ನಿಯಂತ್ರಣ ಸಂಸ್ಥೆ ಈ ಬಗ್ಗೆ ಆಕೆಯನ್ನು ಸಂಪರ್ಕಿಸಿದಾಗ ಆಕೆಯ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.  
ಇದಕ್ಕೆ ಪೂರಕವಾಗಿ ತಮಿಳು, ತೆಲುಗು ಮತ್ತು ಆಂಗ್ಲ ಭಾಷೆಯಲ್ಲಿ ಹೇಳಿದ ವಾಕ್ಯಗಳನ್ನು ವೀಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಅದನ್ನು ಅಂತರ್ಜಾಲದ ಮೂಲಕ ಪ್ರಚಾರ ಮಾಡುವ ಯೋಜನೆ ಹೊಂದಿದ್ದಾರೆ ಎಯಿಡ್ಸ್ ನಿಯಂತ್ರಣ ಸಂಸ್ಥೆಯವರು. ಐದು ಹಿಂದಿ, ಒಂದು ತಮಿಳು ಒಂದು ತೆಲುಗು ತೆಲುಗು ಚಿತ್ರಗಳಲ್ಲಿ ಬ್ಯುಸಿ ಆಗಿರುವ ಈ ಸುಂದರಿ ಸಮಾಜಕ್ಕೆ ಒಂದಷ್ಟು ಸೇವೆ ಮಾಡಲು ಸಮಯ ಹೊಂದಿಸಿ ಕೊಳ್ಳುತ್ತಿದ್ದಾಳೆ. 

Share this Story:

Follow Webdunia kannada