Select Your Language

Notifications

webdunia
webdunia
webdunia
webdunia

ತುಳು ಸಿನಿಮಾದ ಹಾಡಿಗೆ ಧ್ವನಿಯಾದ ಶ್ರೇಯಾ ಹಾಗೂ ಕುನಾಲ್ ಗಾಂಜಾವಾಲ

ತುಳು ಸಿನಿಮಾದ ಹಾಡಿಗೆ ಧ್ವನಿಯಾದ ಶ್ರೇಯಾ ಹಾಗೂ ಕುನಾಲ್ ಗಾಂಜಾವಾಲ
, ಮಂಗಳವಾರ, 21 ಜೂನ್ 2016 (11:09 IST)
ಕರಾವಳಿಯಲ್ಲಿ ಈಗ ತುಳು ಸಿನಿಮಾಗಳ ಕಡೆಗೆ ಒಲವು ತೋರುತ್ತಿರುವ ಕರಾವಳಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ತುಳು ಸಿನಿಮಾಗಳು ಕೂಡ ತಯಾರಾಗುತ್ತಿವೆ.ಕೋಸ್ಟರ್‌ವುಡ್ ಸದ್ಯ ವಿಶ್ವದಾದ್ಯಂತ ಗಮನ ಸೆಳೆಯುತ್ತಿದೆ. ಹೀಗಿರುವಾಗಲೇ ತುಳುವರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ತುಳು ಸಿನಿಮಾದ ಹಾಡೊಂದಕ್ಕೆ ಶ್ರೇಯಾ ಘೋಷಾಲ್ ಹಾಗೂ ಕುನಾಲ್ ಗಾಂಜಾವಾಲ ಅವರು ಧ್ವನಿಯಾಗಿದ್ದಾರೆ.

 
ಅಂದ್ಹಾಗೆ ಶ್ರೇಯಾ ಘೋಷಾಲ್ ಹಾಗೂ ಕುನಾಲ್ ಗಾಂಜಾವಾಲಾ ಅವರು ಹಾಡಿರೋದು ತುಳುವಿನ 'ಪಿಲಿಬೈಲ್ ಯಮುನಕ್ಕ' ಅನ್ನೋ ಸಿನಿಮಾಕ್ಕೆ. ಬಾಲಿವುಡ್‌ನ ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್ ಸಹಿತ ಕುನಾಲ್ ಗಾಂಜಾವಾಲ, ಅಮನ್ ತ್ರಿಶಾ ತುಳುಭಾಷೆಯ ಚಿತ್ರವೊಂದರ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇನ್ನು ಈ ಸಿನಿಮಾಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿ ಖ್ಯಾತರಾಗಿರುವ ಈ ಗಾಯಕರು ಹಾಡುತ್ತಿದ್ದಾರೆ. ಈ ಎಲ್ಲಾ ಗಾಯಕರು ಒಂದೇ ಚಿತ್ರಕ್ಕೆ ಹಾಡುತ್ತಿರುವುದು ಇದೇ ಮೊದಲ ಬಾರಿಗೆ. ಇನ್ನು ಈ ಹಿಂದೆ ಸೋನು ನಿಗಮ್ 'ಮದಿಮೆ'ಗೆ ಅನ್ನೋ ತುಳು ಸಿನಿಮಾಕ್ಕೆ ಹಾಡಿದ್ದರು.
 
ಇನ್ನು ಪಿಲಿಬೈಲ್ ಯುಮುನಕ್ಕ' ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ನಕಾಶ್ ಅಜೀಜ್, ಪ್ರಕಾಶ್ ಮಹಾದೇವನ್ ಕೂಡಾ ಹಾಡಿದ್ದಾರೆ. ಕೆ. ಸೂರಜ್ ಶೆಟ್ಟಿ ನಿರ್ದೇಶನದ 'ಪಿಲಿಬೈಲ್ ಯಮುನಕ್ಕ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಇನ್ನು ಈ ಸಿನಿಮಾದ ಆಡಿಯೋ ಹಕ್ಕನ್ನು ಝೀ ಮ್ಯೂಸಿಕ್ ಪಡೆದುಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಪರವಾಗಿ ಪತ್ನಿ ಸುಮಲತಾ ಬ್ಯಾಟಿಂಗ್