Webdunia - Bharat's app for daily news and videos

Install App

ಶ್ರೀದೇವಿ ಸಂಭಾವನೆ ಬರೋಬ್ಬರಿ .... ಕೋಟಿ ?!

Webdunia
ಬುಧವಾರ, 25 ಮಾರ್ಚ್ 2015 (10:06 IST)
ಟಾಲಿವುಡ್ ಸಿನಿಮಾ ಚಿತ್ರರಂಗದಲ್ಲಿ ಬಾಲನಟಿಯಾಗಿ ಎಂಟ್ರಿ ಆದ ನಟಿ ಶ್ರೀದೇವಿ. ಅದಾದ ಬಳಿಕ ಅತಿ ಕಡಿಮೆ ಸಮಯದಲ್ಲಿ ಹೀರೋಯಿನ್ ಆಗಿ ಜಗತ್ತಿನ ಮುಂದೆ ಬಂದರು. ಎಂಬತ್ತರ ದಶಕದಲ್ಲಿ ಈಕೆ ನಟಿಸಿದ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿತ್ತು. ಗ್ಲಾಮರ್ ಐಕಾನ್ ಆದ ಶ್ರೀದೇವಿ ಟಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್ ಜೊತೆಗೆ ಬಾಲಿವುಡ್ ಕಡೆಗೂ ಸಹಿತ ತಮ್ಮ ಚಿತ್ತ ನೆಟ್ಟರು. 
ಅಲ್ಲಿಯೂ ಆಕೆಯನ್ನು ಗೆಲುವು ಹಿಂಬಾಲಿಸಿತ್ತು. ಆನಂತರ ಆಕೆ ಬೋನಿ ಕಪೂರ್ ಅವರ ಜೊತೆ ಮದುವೆ ಆಗಿ ಎರಡು ಮಕ್ಕಳ ತಾಯಿ ಆದ ಬಳಿಕ ಇಂಗ್ಲೀಶ್-ವಿಂಗ್ಲೀಶ್ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದರು. ಆ ಚಿತ್ರದಲ್ಲಿ ನಟಿಸಿ ಸ್ವಲ್ಪ ದಿನಗಳಾದ ನಂತರ ಈಗ ಮತ್ತೆ ಚಿತ್ರಗಳಲ್ಲಿ ನಟಿಸಲು ಆರಂಭ ಮಾಡಿದ್ದಾರೆ. ಈಗ ಆಕೆ ಪುಲಿ ಎನ್ನುವ ತಮಿಳು ಚಿತ್ರದಲ್ಲಿ ನಟಿಸಿದ್ದಾರೆ. ಮಹಾರಾಣಿ ಪಾತ್ರಧಾರಿ ಆಗಿರುವ ಈಕೆ ಹನ್ಸಿಕಾ ಮೋಟ್ವಾನಿ ತಾಯಿ ಪಾತ್ರಧಾರಿ ಆಗಿದ್ದಾರೆ. ಆ ಪಾತ್ರದ ನಟನೆಗೆಂದು ಆಕೆ ಹೇರಳವಾದ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. 
 
ಈಗ ಒಂದು ಹಿಂದಿ ಚಿತ್ರದಲ್ಲಿ ನಟಿಸಲು ಆಕೆ ಸಮ್ಮತಿ ನೀಡಿದ್ದಾರಂತೆ. ಆಡ್ ಸಿನಿಮಾ ತಯಾರಿಸುವ ಉದಯ್ ವಡೆಯರ್ ಅವರ ತಾಯಿ ಮಗಳ ನಡುವಿನ ಬಾಂಧವ್ಯದ ಕಥೆ ಹೊಂದಿರುವ ಚಿತ್ರದಲ್ಲಿ ತಾಯಿ ಪಾತ್ರಧಾರಿ ಆಗಲು ಸಮ್ಮತಿಸಿದ್ದಾರಂತೆ. ಆ ಪಾತ್ರದಲ್ಲಿ ನಟಿಸಲು ಆಕೆ ಕೇಳಿರುವ ಸಂಭಾವನೆ ಬರೋಬ್ಬರಿ ಐದು ಕೋಟಿ ರೂಪಾಯಿಗಳು! ಆಕೆಯ ಬೇಡಿಕೆಯನ್ನು ನಿರ್ಮಾಪಕ ಒಪ್ಪಿಕೊಂಡಿದ್ದಾರಂತೆ. ಶ್ರೀದೇವಿಯಂತಹ ಗ್ಲಾಮರ್ ಅಮ್ಮ ತಮ್ಮ ಚಿತ್ರಕ್ಕೆ ಬೇಕಾದರೆ ಕೊಡಲೇ ಬೇಕು ಆಕೆ ಕೇಳಿದಷ್ಟು ಹಣ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments