Select Your Language

Notifications

webdunia
webdunia
webdunia
webdunia

ಮೆಗಾ ಸ್ಟಾರ್ ಚಿರು ಜೊತೆ ಶ್ರೀದೇವಿ ನಟನೆ

ಮೆಗಾ ಸ್ಟಾರ್ ಚಿರು ಜೊತೆ ಶ್ರೀದೇವಿ ನಟನೆ
, ಶನಿವಾರ, 25 ಏಪ್ರಿಲ್ 2015 (10:07 IST)
ಈಗ ಟಾಲಿವುಡ್ ಪಟ್ಟಣದಲ್ಲಿ ಚಿರಂಜೀವಿ ಅವರ ಅಭಿನಯದ 150ನೇ ಚಿತ್ರದ ಬಗ್ಗೆ ಹೆಚ್ಚು ಚರ್ಚೆ. ಈ ಸಿನಿಮಾಗೆ ಸಂಬಂಧ ಪಟ್ಟಂತೆ ಅನೇಕ ವಿಷಯಗಳ ಚರ್ಚೆ ನಡೆಯುತ್ತಿದೆ. ಅದರ ಕಥೆಯ ಬಗ್ಗೆ ಕುತೂಹಲವಿದೆ. ಅದೇ ಈಗ ಹಾಟ್ ಟಾಪಿಕ್ ಆಗಿ ಇಡಿ ಟಿ-ಟೌನ್‌ನಲ್ಲಿ ಹರಿದಾಡುತ್ತಿದೆ. 
ಸಿನಿಮಾದ ಬಗ್ಗೆ ಸಾಕಷ್ಟು ಎಚ್ಚರ ವಹಿಸಿರುವ ಚಿರು ಗೆಲುವಿಗೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಮಾಡುತ್ತಿದ್ದಾರೆ. ಅದಕ್ಕೆಂದು ಅವರು ತಮ್ಮ ಚಿತ್ರದಲ್ಲಿ ಯುವ ಬರಹಗಾರರಿಗೂ ಸಹಿತ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಇಷ್ಟೆಲ್ಲಾ ಸಿದ್ಧತೆ ಇರುವಾಗ  ಚಿರಂಜೀವಿಗೆ ಯಾರು ನಾಯಕಿ ಎನ್ನುವ ಪ್ರಶ್ನೆ ಮೂಡುತ್ತದೆ. ಅವರ ವಯಸ್ಸಿಗೆ ಹೊಂದಿಕೆಯಾಗುವ ನಟಿಯರು ಯಾರು ಎನ್ನುವ ಪ್ರಶ್ನೆ ಮೂಡುತ್ತಿದೆ. ಮುಖ್ಯವಾಗಿ ಚಿರು ಕಿರಿಯ ವಯಸ್ಸಿನ ನಟಿಯರ ಜೊತೆ ನಟಿಸಿದರೆ ಅದರಿಂದ ಆ ಪಾತ್ರದ ಗಮ್ಮತ್ತು ಹಾಳಾಗುವ ಸಂಭವ ಅಧಿಕ ಈ ಎಲ್ಲ ಸಂಗತಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಶ್ರೀದೇವಿ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ ಚಿತ್ರತಂಡದವರು. 
 
ಜಗದೇಕ ವೀರುಡು ಅತಿಲೋಕ ಸುಂದರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿ ಗೆಲುವಿನ ಪತಾಕೆ ಹಾರಿಸಿದ್ದ ಈ ಜೋಡಿಯೇ ಚಿರು ಅವರ ಮುಂದಿನ ಚಿತ್ರಕ್ಕೆ ಸೂಕ್ತ ಎನ್ನುವ ಅಂಶಕ್ಕೆ ಈಗ ಬೆಲೆ ಸಿಕ್ಕಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ಬೆಳವಣಿಗೆ ಗುಟ್ಟಾಗಿ ನಡೆಯುತ್ತಿದೆ ಎನ್ನುವುದು ಸಹ ಗುಟ್ಟಾಗಿ ಉಳಿದಿಲ್ಲ. ಶ್ರೀದೇವಿಯೇ ನಾಯಕಿಯಾದರೆ ಅದನ್ನು ಅಧಿಕೃತವಾಗಿ ಸಧ್ಯದಲ್ಲೇ ತಿಳಿಸುತ್ತಾರೆ ಚಿತ್ರತಂಡವರು. ಇಲ್ಲವಾದರೆ ಆದ ಬದಲಾವಣೆಯ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ..! 

Share this Story:

Follow Webdunia kannada