Select Your Language

Notifications

webdunia
webdunia
webdunia
webdunia

ರಾಕ್ ಆನ್ 2 ರ ಮೂಲಕ ಶ್ರದ್ಧಾ ಕಪೂರ್ ಹಿನ್ನಲೆ ಗಾಯನ ಪ್ರಪಂಚಕ್ಕೂ ಎಂಟ್ರಿ

ರಾಕ್ ಆನ್ 2  ರ ಮೂಲಕ  ಶ್ರದ್ಧಾ ಕಪೂರ್ ಹಿನ್ನಲೆ ಗಾಯನ ಪ್ರಪಂಚಕ್ಕೂ ಎಂಟ್ರಿ
, ಶನಿವಾರ, 25 ಜುಲೈ 2015 (10:06 IST)
ಶ್ರದ್ಧಾ ಕಪೂರ್  ಬಾಲಿವುಡ್ ನಲ್ಲಿರುವ ಪ್ರತಿಭಾವಂತ ಕಲಾವಿದೆ. ಅಪ್ಪ ಶಕ್ತಿ ಕಪೂರ್ ಅವರಂತೆ ತಮ್ಮ ಪ್ರತಿಭೆಯನ್ನು ಮಾನದಂಡ ಮಾಡಿಕೊಂಡಿರುವ ಚೆಲುವೆ ಆಕೆ. ಆಶಿಕಿ 2 ಮೂಲಕ ಬಣ್ಣ ಹಚ್ಚಿದ ಈ ಚೆಲುವೆ, ಆ ಬಳಿಕ ನಟಿಸಿದ ಚಿತ್ರಗಳಲ್ಲಿನ ಪಾತ್ರಗಳು ಜನಮನ ಸೆಳೆದಿದ್ದವು. ಆಕೆಯು ನಟನೆಯ ಜೊತೆಗೆ ಪ್ರೀತಿಯ ವಿಷಯದಲ್ಲೂ ಸಹಿತ ಸುದ್ದಿ ಮಾಡಿದ್ದರು.
ಪ್ರಣಯ ಅದೂ ಇದೂ ಎಂದು ಮಾಧ್ಯಮಗಳ ಕಣ್ಣಿಗೆ ಬೀಳದೆ ಇದ್ದರೇ ಜನಕ್ಕೆ ಹೆಚ್ಚು ಗೊತ್ತಾಗಲು  ಸಾಧ್ಯವಿಲ್ಲ ಎನ್ನುವ ಸತ್ಯ ಅರಿತಿರುವ ಈ ತಾರೆ ಯಾವುದೋ ಒಂದು ಸ್ವಲ್ಪ ಪ್ರಮಾಣದಲ್ಲಿ ಮಾಧ್ಯಮಗಳ ಮುಂದೆ ಬಣ್ಣಬಣ್ಣವಾಗಿ ಬರುತ್ತಿದ್ದಾರೆ. ಜಾಹೀರಾತು ಲೋಕದಲ್ಲಿ ಸಹ ಪಾದಾರ್ಪಣೆ ಮಾಡಿರುವ ಶ್ರದ್ಧಾ ಅವರ ಹೈದರ್ ಚಿತ್ರದಲ್ಲಿನ ನಟನೆ ಎಲ್ಲರ ಗಮನ ಸೆಳೆದಿತ್ತು. ಈಗ ಆಕೆಯು ಹಾಡುವುದರ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಅವರು ಮುಂದಿನ ಚಿತ್ರ ರಾಕ್ ಆನ್ 2  ರಲ್ಲಿ ಶ್ರದ್ಧಾ ಹಾಡುತ್ತಿದ್ದಾರೆ. ಆ ಮುಖಾಂತರ ತಾವು ಸಂಪೂರ್ಣವಾಗಿ ಸಿದ್ಧವಾಗಿ ಚಿತ್ರರಂಗಕ್ಕೆ ಬಂದಿದ್ದೇವೆ ಎಂದು ಜಗತ್ತಿಗೆ ತೋರುತ್ತಿದ್ದಾರೆ. ಅವರ ಈ ಸಾಧನೆಯು ಹೆಚ್ಚು ಉಜ್ವಲವಾಗಲಿ

Share this Story:

Follow Webdunia kannada