Webdunia - Bharat's app for daily news and videos

Install App

ಸಾವಿಗೆ ಮುನ್ನ ಪ್ರತ್ಯೂಷಾ ಹಾಕಿದ್ದ ವಾಟ್ಸಪ್ ಸ್ಟೇಟಸ್ ಏನು?

Webdunia
ಶನಿವಾರ, 2 ಏಪ್ರಿಲ್ 2016 (16:17 IST)
ಶುಕ್ರವಾರ ಸಾವಿಗೆ ಶರಣಾದ ಪ್ರಖ್ಯಾತ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಅವರು ಸಾವಿಗೂ ಮುನ್ನ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಆದರೆ ಅವರು ತಮ್ಮ ವಾಟ್ಸ್‌ಅಪ್‌ಗೆ ಹಾಕಿರುವ ಕೊನೆಯ ಸ್ಟೇಟಸ್ ಪ್ರೀತಿ-ಪ್ರೇಮದ ವಿಚಾರಕ್ಕೆ ಮನಸ್ತಾಪವಾಗಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆಯನ್ನು ಪ್ರಬಲವಾಗಿಸಿದೆ. 

ನಮ್ಮ ಕಂಗಳನ್ನು ಒದ್ದೆ ಮಾಡುವಂತ ಅವರ ವಾಟ್ಸಪ್ ಸ್ಟೇಟಸ್ ಹೀಗಿದೆ:  ಮರ್ಕೆ ಬಿ ಮುಹ್ ನಾ ತುಜ್ಸೆ ಮೋಡನಾ (ಸತ್ತ ಮೇಲೂ ಕೂಡ ನಾ ನಿನ್ನೆಡೆಯಿಂದ ಮುಖ ತಿರುಗಿಸುವುದಿಲ್ಲ).
 
ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರದ ಮೂಲಕ ಮನೆಮಾತಾಗಿದ್ದ ಖ್ಯಾತಿಯ ಪ್ರತ್ಯೂಷ್ಯಾ ಬ್ಯಾನರ್ಜಿ (24) ಮುಂಬೈನ ಸಬ್ ಅರ್ಬನ್‌ ಕಾಂಡಿವಲಿ ಸಮೀಪದ ಬಂಗುರ್ ನಗರ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
 
ನಿನ್ನೆ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದ್ದು 24 ವರ್ಷದ ಪ್ರತ್ಯೂಷಾ ಫ್ಯಾನ್‌ಗೆ ನೇತಾಡುತ್ತಿರುವುದನ್ನು ನೋಡಿದ ಅವರ ತಾಯಿ ಕೂಡಲೇ ಅವರನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲಾಗಲೇ ಪ್ರತೂಷ್ಯಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆದರೆ ಡೆತ್ ನೋಟ್ ಪತ್ತೆಯಾಗಿಲ್ಲ.
 
ಈ ದುಡುಕಿನ ನಿರ್ಧಾರಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಪ್ರೇಮಿ ರಾಹುಲ್ ಸಿಂಗ್ ಜತೆಯಲ್ಲಿ ಆಕೆಯ ಸಂಬಂಧ ಹಳಸಿದ್ದುದೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. 
 
ಝಲಕ್‌ ದಿಖ್ಲಾ ಜಾ 5’ರಲ್ಲಿ ಪಾಲ್ಗೊಂಡಿದ್ದ ಅವರು ‘ಬಿಗ್‌ ಬಾಸ್‌7’ ರಲ್ಲೂ  ಭಾಗವಹಿಸಿದ್ದರು. ‘ಪ್ಯಾರ್‌ ತೂನೆ ಕ್ಯಾ ಕಿಯಾ’, ‘ಹಮ್‌ ಹೈ ನಾ’, 'ಸಸುರಾಲ್ ಸಿಮರ್ ಕಾ' ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದರು. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments