Webdunia - Bharat's app for daily news and videos

Install App

ಗೆಳೆಯನ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡ 'ಅಗ್ನಿಸಾಕ್ಷಿ' ಖ್ಯಾತಿಯ ಶೋಭಾ ಶೆಟ್ಟಿ

Sampriya
ಸೋಮವಾರ, 6 ಮೇ 2024 (16:25 IST)
photo Courtesy Instagram
ಬೆಂಗಳೂರು:  ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ತನು ಪಾತ್ರದಲ್ಲಿ ಜನಮನ್ನಣೆ ಗಳಿಸಿ ತೆಲುಗು ಕಿರುತೆರೆಗೆ ಹಾರಿದ ನಟಿ ಶೋಭಾ ಶೆಟ್ಟಿ ಇಂದು ತಮ್ಮ ಬಹುಕಾಲದ ಗೆಳೆಯ ನಟ ಯಶವಂತ್ ರೆಡ್ಡಿ ಜತೆ ನಿಶ್ಚಿತಾರ್ಥ ಮಾಡಿಕೊಂಡರು.

ಕನ್ನಡದಲ್ಲಿ ತನು ಪಾತ್ರದಲ್ಲಿ ತುಂಬಾನೇ ಮೆಚ್ಚುಗೆ ಗಳಿಸಿದ ಶೋಭಾ ಅವರು ನಂತರ ಕಾರ್ತಿಕ ದೀಪಂ ಎಂಬ ಸೂಪರ್‌ ಹಿಟ್ ಧಾರಾವಾಹಿಯಲ್ಲಿ ಮೋನಿತಾ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಧಾರಾವಾಹಿಯಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ ನಂತರ, ಶೋಭಾ ಇತ್ತೀಚೆಗೆ ಬಿಗ್ ಬಾಸ್ ತೆಲುಗು ಸೀಸನ್ 7 ರಲ್ಲಿ ಭಾಗವಹಿಸಿದರು. ಇನ್ನೂ ನೇರ ಮಾತಿನ ಮೂಲಕ ಬಿಗ್‌ಬಾಸ್‌ನಲ್ಲಿ ಹೆಚ್ಚು ಗುರುತಿಸಿಕೊಂಡರು.

ಇನ್ನೂ ಬಿಗ್ ಬಾಸ್ ಮನೆಯಲ್ಲೇ ಶೋಭಾ ತನ್ನ ಗೆಳೆಯ ಯಶವಂತ್ ರೆಡ್ಡಿಯನ್ನು ಪರಿಚಯಿಸಿದರು. ಅವರಿಬ್ಬರೂ ಕಾರ್ತಿಕ ದೀಪಂ ಮತ್ತು ಇತರ ಕೆಲವು ಕಿರುಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಕಾಲಾನಂತರದಲ್ಲಿ, ಅವರು ಪರಸ್ಪರ ಪ್ರೀತಿ ಮಾಡಲು ಶುರು ಮಾಡಿರುವುದಾಗಿ ಹೇಳಿಕೊಂಡರು.

ಈ ಹಿಂದೆ ಶೋಭಾ ಅವರ ಬೆಂಗಳೂರಿನ ಮನೆಯಲ್ಲಿ ಹೂ ಮುಡಿಸುವ ಶಾಸ್ತ್ರ ನಡೆಯಿತು. ಅದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದೀಗ ಅಧಿಕೃತವಾಗಿ ಈ ಜೋಡಿ ಇಂದು ನಿಶ್ಚಿತಾರ್ಥ ಮಾಡಿಕೊಂಡಿದೆ. ಈ ಸಮಾರಂಭದಲ್ಲಿ ಎರಡು ಕುಟುಂಬದವರು ಭಾಗವಹಿಸಿ ಶುಭ ಹಾರೈಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

ಬಾಲಿವುಡ್ ನಟ ಗುಲ್ಶನ್ ದೇವಯ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕಾಂತಾರ ತಂಡ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಮುಂದಿನ ಸುದ್ದಿ
Show comments