Select Your Language

Notifications

webdunia
webdunia
webdunia
webdunia

ಶಿವಣ್ಣನ ಬೆಳ್ಳಿ ನೋಡಿ ರೋಮಾಂಚಿತರಾದ ನ್ಯೂಯಾರ್ಕ್ ನಾಗರಿಕರು

ಶಿವಣ್ಣನ ಬೆಳ್ಳಿ ನೋಡಿ ರೋಮಾಂಚಿತರಾದ ನ್ಯೂಯಾರ್ಕ್ ನಾಗರಿಕರು
, ಸೋಮವಾರ, 3 ನವೆಂಬರ್ 2014 (12:31 IST)
ವಿದೇಶಿಯರು ಭಾರತ ಪ್ರವಾಸ ಮಾಡುವಾಗ ದೇವಸ್ಥಾನಗಳು, ಐತಿಹಾಸಿಕ ಸ್ಥಳಗಳು ನೋಡಿ ಆನಂದ ಪಡುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ನ್ಯೂಯಾರ್ಕ್ ನಾಗರಿಕರು ಶುಕ್ರವಾರ ಸೆಂಚುರಿ ಸ್ಟಾರ್  ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ಬೆಳ್ಳಿ ಚಿತ್ರವನ್ನು ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.
 
ಆಂಡ್ರೂ ಮತ್ತು ಮಾರ್ಟಿನ್ ಎನ್ನುವ  ಈ ಇಬ್ಬರು ಶುಕ್ರವಾರ ಕಪಾಲಿ ಚಿತ್ರ ಮಂದಿರದ ಮುಂದೆ ಬಂದಾಗ ಅಲ್ಲಿ ಅವರಿಗೆ ಅಪಾರವಾದ ಜನರಾಶಿ ಕಂಡು ಆಶ್ಚರ್ಯ ಆಗಿದೆ. ಅದೇನೆಂದು ತಿಳಿಯಲು ಹತ್ತಿರ ಹೋದಾಗ ಬೆಳ್ಳಿ ಚಿತ್ರ ಎಂದು ಗೊತ್ತಾಗಿದೆ. ತಾವು ಸಹ ಬ್ಲಾಕ್ ನಲ್ಲಿ 200 ರೂಪಾಯಿ ನೀಡಿ ಟಿಕೆಟ್ ಕೊಂಡಿದ್ದಾರೆ. ಅದನ್ನು ತೆಗೆದು ಕೊಂಡು ಸಿನಿಮಾ   ನೋಡ ಬೇಕು ಎಂದು ಥಿಯೇಟರ್ ಒಳಗೆ ಹೋಗಬೇಕು ಎಂದುಕೊಳ್ಳುವಾಗ ಅದನ್ನು ಯಾರೋ ಕದ್ದಿದ್ದಾರೆ. ಆ ಸಮಯದಲ್ಲಿ ಚಿತ್ರದ ಸಂಗೀತ ನಿರ್ದೇಶಕ ಶ್ರೀಧರ್ ಸಂಬ್ರಾಂ ಅವರು ಧಾವಿಸಿ ಬಂದು ಈ ಯುವಕರಿಗೆ ಸಹಾಯ ಮಾಡಿ ಸಿನಿಮಾ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. 
 
ಆಂಡ್ರೂ ಮತ್ತು ಮಾರ್ಟಿನ್ ಅವರು ತಮ್ಮ ಮೆಚ್ಚಿನ ತಾರೆಯ ಬಗ್ಗೆ ಈ ರೀತಿಯ ಕ್ರೇಜ್ ಹೊಂದಿರುವ ದೃಶ್ಯ ಸಕತ್ ಆಶ್ಚರ್ಯ ಉಂಟು ಮಾಡಿದೆ. ಏಕೆಂದರೆ ಇಂತಹ ದೃಶ್ಯಗಳನ್ನು ಅವರು ಕಂಡೆ ಇಲ್ಲ ತಮ್ಮ ತಾಯ್ನಾಡಿನಲ್ಲಿ. ತಾವು ಚಿತ್ರ ನೋಡಿ ಎಂಜಾಯ್ ಮಾಡಿದರು. ಅಲ್ಲದೆ, ಶಿವಣ್ಣ ಅಭಿಮಾನಿಗಳು ಚಿತ್ರ ವೀಕ್ಷಣೆ ಮಾಡುವಾಗ ಅನುಭವಿಸುತ್ತಿದ್ದ ಖುಷಿಯನ್ನು ವೀಡಿಯೋದಲ್ಲಿ ಸೆರೆ ಹಿಡಿದು ನ್ಯೂಯಾರ್ಕ್ಗೆ ಕೊಂಡೊಯ್ದರು.. ಹೀಗೆ ಕನ್ನಡಿಗರು ನ್ಯೂಯಾರ್ಕ್ ಗೆ ಹೋದರು ಶಿವಣ್ಣನ ಬೆಳ್ಳಿ ಚಿತ್ರದಿಂದ..!
 

Share this Story:

Follow Webdunia kannada