Select Your Language

Notifications

webdunia
webdunia
webdunia
webdunia

ಜೂನ್ 12ರಂದು 'ವಜ್ರಕಾಯ'ದಲ್ಲಿ ಮಿಂಚಲಿರುವ ಶಿವಣ್ಣ

ಜೂನ್ 12ರಂದು 'ವಜ್ರಕಾಯ'ದಲ್ಲಿ ಮಿಂಚಲಿರುವ ಶಿವಣ್ಣ
, ಗುರುವಾರ, 28 ಮೇ 2015 (10:39 IST)
ರನ್ನ ಚಿತ್ರ ಎಂದಿಗೆ ಬಿಡುಗಡೆ ಆಗುತ್ತದೆಯೋ ಎಂದು ಕಾದಿದ್ದವರಿಗೆ ಅದು ಜೂನ್ ನಲ್ಲಿ ಬಿಡುಗಡೆ ಆಗುವ ಬಗ್ಗೆ ತಿಳಿದು ಬಂತು. ಎಲ್ಲರ ಚಿತ್ತ ವಜ್ರಕಾಯದತ್ತ  ತೆರಳಿದಾಗ ಅದೂ ಸಹ ಜೂನ್ ನಲ್ಲಿಯೇ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಹೊರ ಬಂದಿದೆ.  ಡಾ. ಶಿವರಾಜ್ ಕುಮಾರ್ ಅಭಿನಯಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಲಾಗಿದೆ. ಈ ಚಿತ್ರ ಎಲ್ಲವೂ ನಿರೀಕ್ಷಿಸಿದಂತೆ ನಡೆದರೆ ಜೂನ್ 12  ಕ್ಕೆ ಬಿಡುಗಡೆ ಆಗಲಿದೆ.ಆರಂಭದಲ್ಲಿ ಇವರು ಜೂನ್ 5ಕ್ಕೆ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದರೂ ಸಹಿತ ಸೆನ್ಸಾರ್  ಬೋರ್ಡ್ ನಿಂದ  ಸರ್ಟಿಫಿಕೇಟ್ ಬರಬೇಕಾದ ಕಾರಣದಿಂದ ದಿನಾಂಕ ಮುಂದೂಡಿದರು. 
ಈಗ ಚಿತ್ರ ಜೂನ್ 12  ಕ್ಕೆ ಬಿಡುಗಡೆ ಆಗುವ ಎಲ್ಲ ಸಾಧ್ಯತೆಗಳು ಕಂಡು ಬಂದಿದೆ. ಪ್ರಸ್ತುತ ಅಂತಿಮ ಸುತ್ತಿನ ಕೆಲಸಗಳು ಚೆನ್ನೈನಲ್ಲಿ ನಡೆಯುತ್ತಿದೆ. ಎಲ್ಲವೂ ಬೇಗ ನಡೆದಿದ್ದಿದ್ದರೆ ರನ್ನ ಮತ್ತು ವಜ್ರಕಾಯ ಎರಡೂ ಚಿತ್ರಗಳು ಒಂದೇ ವಾರದಲ್ಲಿ ಬಿಡುಗಡೆ ಆಗುತ್ತಿತ್ತು.ವಜ್ರಕಾಯ ಚಿತ್ರ ಶಿವರಾಜ್ ಕುಮಾರ್ ಮತ್ತು ಹರ್ಷ ಅವರ ಜೋಡಿಯಲ್ಲಿ ಸಿದ್ಧವಾಗಿದೆ. ಈ ಜೋಡಿ ಭಜರಂಗಿ ಚಿತ್ರದ ಮೂಲಕ ಉತ್ತಮ ದಾಖಲೆ ಸ್ಥಾಪಿಸಿದ್ದರು ಬಾಕ್ಸಾಫೀಸಲ್ಲಿ! ಈಗಾಗಲೇ  ಸಂತೋಷ್ ಚಿತ್ರಮಂದಿರದಲ್ಲಿ 75  ದಿನಗಳ ಪ್ರದರ್ಶನ ಪೂರೈಸಿರುವ ರಣವಿಕ್ರಮನನ್ನು  ತೆಗೆದು ಆ ಜಾಗದಲ್ಲಿ ವಜ್ರಕಾಯ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತದೆ ಎಂದು  ಹಂಚಿಕೆದಾರ ಜಯಣ್ಣ ಅವರು ಹೇಳಿದ್ದಾರೆ. 

Share this Story:

Follow Webdunia kannada