Select Your Language

Notifications

webdunia
webdunia
webdunia
webdunia

’ಶ್ರೀಕಂಠ’ ಟ್ರೈನ್ ಸ್ಟಂಟ್ ಬಗ್ಗೆ ಶಿವಣ್ಣ ಬಿಚ್ಚಿಟ್ಟ ಸತ್ಯ

’ಶ್ರೀಕಂಠ’ ಟ್ರೈನ್ ಸ್ಟಂಟ್ ಬಗ್ಗೆ ಶಿವಣ್ಣ ಬಿಚ್ಚಿಟ್ಟ ಸತ್ಯ
Bangalore , ಗುರುವಾರ, 5 ಜನವರಿ 2017 (11:23 IST)
ಶ್ರೀಕಂಠ ಚಿತ್ರ ಈ ವಾರ ತೆರೆಕಾಣುತ್ತಿದೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸಿನಿಮಾ. ಈ ಚಿತ್ರದಲ್ಲಿ ರೈಲಿನ ಕೆಳಗೆ ಮಲಗುವ ಸ್ಟಂಟ್‌ನಲ್ಲಿ ಸ್ವತಃ ಶಿವಣ್ಣ ಕಾಣಿಸುತ್ತಾರೆ. ಈ ಬಗ್ಗೆ ಅವರು ಮಾತನಾಡಿದ್ದು, ಈ ಸನ್ನಿವೇಶದ ಮಹತ್ವವನ್ನು ಪ್ರೇಕ್ಷಕರ ಜೊತೆಗೆ ಹಂಚಿಕೊಂಡಿದ್ದಾರೆ.
 
ಈ ಹಿಂದೆ ಬಂದಿದ್ದಂತ ಪ್ರೀತ್ಸೆ ಚಿತ್ರದಲ್ಲಿ ನಾನು ಮತ್ತು ಉಪೇಂದ್ರ ಜೀಪ್ ತಗೊಂಡು ಟ್ರೇನ್ ಮುಂದೇನೆ ಪಾಸ್ ಆಗುವಂತ ಸೀನ್ ಮಾಡಿದ್ದೇವೆ. ಶ್ರೀರಾಮ್ ಚಿತ್ರದಲ್ಲಿ ಬೈಕನ್ನು ನಾನೇ ಓಡಿಸಿ ಟ್ರೇನ್ ಬರ್ತಾ ಇದ್ದಂತೆ ಕ್ರಾಸ್ ಮಾಡಿದ್ದೇನೆ. ಕೆಲವೊಂದು ಸಹ ರಿಸ್ಕ್ ತಗೋಬೇಕಾಗತ್ತೆ ಎನ್ನುತ್ತಾರೆ ಶಿವಣ್ಣ.
 
ಇದಕ್ಕೆಲ್ಲಾ ಧೈರ್ಯ ಬೇಕಷ್ಟೇ. ಅದೇ ರೀತಿ ಶ್ರೀಕಂಠ ಚಿತ್ರದಲ್ಳು ಡ್ಯೂಪ್ ಇಲ್ಲದಂತೆ ಟ್ರೇನ್ ಸನ್ನಿವೇಶ ಮಾಡಿದ್ದೇನೆ. ಈ ರಿಸ್ಕ್ ಬೇಕಾಗಿರಲಿಲ್ಲ. ಆದರೂ ಮಾಡಿದ್ದೇನೆ. ಒಂದು ವೇಳೆ ಹೆಚ್ಚುಕಡಿಮೆ ಆದರೆ ನಿರ್ಮಾಪಕ, ರೈಲ್ವೆ ಇಲಾಖೆ ಎಲ್ಲರಿಗೂ ತೊಂದರೇನೆ. ನಾನೇನು ಬೇಗ ಸಾಯಬೇಕು ಅಂತ ಇಲ್ಲ. ಇನ್ನೂ 50 ವರ್ಷ ಬದುಕುವ ಆಸೆ ಇದೆ ಎಂದಿದ್ದಾರೆ ಶಿವಣ್ಣ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕುಮಾರನಿಗೆ ತಮಿಳು ಸ್ಟಾರ್ ಶರತ್ ಕುಮಾರ್ ಡಬ್ಬಿಂಗ್