Select Your Language

Notifications

webdunia
webdunia
webdunia
webdunia

ರೀಮೇಕ್‍ಗೆ ಓಕೆ ಎಂದ ಸೆಂಚುರಿ ಸ್ಟಾರ್ ಶಿವಣ್ಣ

ರೀಮೇಕ್‍ಗೆ ಓಕೆ ಎಂದ ಸೆಂಚುರಿ ಸ್ಟಾರ್ ಶಿವಣ್ಣ
Bangalore , ಗುರುವಾರ, 5 ಜನವರಿ 2017 (11:16 IST)
ಸೆಂಚುರಿಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರೀಮೇಕ್ ಚಿತ್ರಗಳನ್ನು ಮಾಡಲ್ಲ ಎಂದು ಸಂಕಲ್ಪ ಮಾಡಿದ್ದರು. ಆದರೆ ಆ ಸಂಕಲ್ಪವನ್ನು ಮುರಿಯುವ ಸಂದರ್ಭ ಬಂದಿದೆಯೆ? ಅವರನ್ನು ಇತ್ತೀಚೆಗೆ ಮಲಯಾಳಂನ ಒಪ್ಪಂ ಚಿತ್ರ ಬಹಳವಾಗಿ ಕಾಡಿದೆಯಂತೆ.
 
ಆ ತರಹ ಸಿನಿಮಾದಲ್ಲಿ ನಾನೂ ಅಭಿನಯಿಸಬೇಕು. ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ ಅದು ಎಂದಿದ್ದಾರೆ. ಅದರ ರೀಮೇಕ್‌ನಲ್ಲಿ ಅಭಿನಯಿಸಬೇಕೆಂದಿದ್ದೇನೆ. ಬಹಳ ಅಪರೂಪದ ಸಿನಿಮಾ ಅದು ಎಂದು ಶಿವಣ್ಣ ಹೇಳಿದ್ದಾರೆ.
 
ಶಿವಣ್ಣ ರೀಮೇಕ್ ಮಾಡ್ತಾರೆ ಅಂದ್ರೆ ಸಾಲು ಸಾಲು ನಿರ್ದೇಶಕರು, ನಿರ್ಮಾಪಕರು ರೆಡಿಯಿರುತ್ತಾರೆ. ಒರಿಜಿನಲ್ ಸಿನಿಮಾಗಳಿಗೆ ಶಿವಣ್ಣನಿಗೆ ಟೈಮಿಲ್ಲ. ಇನ್ನು ರೀಮೇಕ್ ಅಂದ್ರೆ ಇನ್ನೆಷ್ಟು ಬಿಜಿಯಾಗಬಹುದು ಎಂಬ ಲೆಕ್ಕಾಚಾರ ಗಾಂಧಿನಗರದಲ್ಲಿ ನಡೆಯುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಸೂಪರ್ ಜೋಡಿ 2’ ಸೆಂಚುರಿ ಸ್ಟಾರ್ ರಮೇಶ ಅರವಿಂದ್ ಚಾಲನೆ