Webdunia - Bharat's app for daily news and videos

Install App

ಜೊತೆಯಾಗಿ ನಟಿಸ್ತಾರಂತೆ ಶಿವಣ್ಣ ಹಾಗೂ ಸುದೀಪ್

Webdunia
ಶುಕ್ರವಾರ, 13 ನವೆಂಬರ್ 2015 (10:41 IST)
ಸುದೀಪ್ ಹಾಗೂ ದರ್ಶನ್ , ಸುದೀಪ್ ಹಾಗೂ ಶಿವರಾಜ್ ಕುಮಾರ್ ಜೊತೆಯಾಗಿ ನಟಿಸುತ್ತಾರೆ ಎಂಬ ಸುದ್ದಿಗಳು ಆಗಾಗ್ಗೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ಕೇಳಿ ಬರುತ್ತಲೇ ಇವೆ. ಆದ್ರೆ ಚಂದನವನದ ಅಭಿಮಾನಿಗಳಿಗೆ ಖುಷಿ ನೀಡುವ ಸುದ್ದಿಯೊಂದು ಬಂದಿದೆ. ಶಿವಣ್ಣ ಹಾಗೂ  ಸುದೀಪ್ ಅವರನ್ನು ಜೊತೆಯಾಗಿ ನೋಡುವ ಕ್ಷಣ ಅಭಿಮಾನಿಗಳಿಗೆ ಹತ್ತಿರವಾಗುತ್ತಿದೆ.

 
ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರನ್ನು ಜೊತೆಗೂಡಿಸಿ ಸಿನಿಮಾ ಮಾಡ್ತಿರೋದಾಗಿ ನಿರ್ಮಾಪಕ ಸಿ.ಆರ್. ಮನೋಹರ್ ಅವರು ತಿಳಿಸಿದ್ದಾರೆ. ಇನ್ನು ಸಿನಿಮಾದ ಟೈಟಲ್ ಡಿಸೆಂಬರ್ 7 ರಂದು ಲಾಂಚ್ ಆಗಲಿದೆ. ಮತ್ತೊಂದು ವಿಶೇಷ ಅಂದ್ರೆ ಈ ಸಿನಿಮಾ ಬಹು ಬಜೆಟ್‌ನ ಸಿನಿಮಾವಾಗಿದ್ದು, 4 ಪ್ರಮುಖ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಅದರ ಕನ್ನಡ ವರ್ಷನ್ ನಲ್ಲಿ ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ.
 
ಇನ್ನು ಮಹಾನ್ ನಟರನ್ನು ಜೊತೆಯಾಗಿ ತೆರೆ ಮೇಲೆ ತೋರಿಸೋ ಜವಬ್ದಾರಿ ಹೊತ್ತುಕೊಂಡಿರೋದು ಜೋಗಿ ಸಿನಿಮಾದ ನಿರ್ದೇಶಕ ಪ್ರೇಮ್. ಆದರೆ ಸಿನಿಮಾದಲ್ಲಿ ಇಬ್ಬರಿಗೆ ನಾಯಕಿಯರಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಅನ್ನೋದು ಇದುವರೆಗೂ ನಿರ್ಧಾರವಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆಯೂ ಮಾಹಿತಿ ಹೊರ ಬರಲಿದೆ. ಶಿವರಾಜ್ ಕುಮಾರ್ ಹಾಗೂ  ಸುದೀಪ್ ಜೊತೆಯಾಗಿ ನಟಿಸುತ್ತಾರೆ ಅನ್ನೋ ಸುದ್ದಿ ಚಿತ್ರರಸಿಕರಿಗೆ ಈ ಬಾರಿಯ ದೀಪಾವಳಿಯ ಗಿಫ್ಟ್ ಆಗಿ ದೊರೆತಿದ್ದು, ಸಿನಿಮಾ ಯಾವಾಗ ಬರುತ್ತೆ ಅಂತಾ ಕಾತುರದಿಂದ ಕಾಯುತ್ತಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments