Select Your Language

Notifications

webdunia
webdunia
webdunia
webdunia

ಸಪ್ತಪದಿ ತುಳಿದ ಶಿವಣ್ಣ ಮಗಳು

ಸಪ್ತಪದಿ ತುಳಿದ ಶಿವಣ್ಣ ಮಗಳು
ಬೆಂಗಳೂರು , ಸೋಮವಾರ, 31 ಆಗಸ್ಟ್ 2015 (11:56 IST)
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಟ ಶಿವರಾಜ್‍ಕುಮಾರ್ ಅವರ ಪುತ್ರಿ ಡಾ.ನಿರುಪಮಾ ಅವರ ವಿವಾಹ ಸಮಾರಂಭ ನಡೆಯುತ್ತಿದ್ದು ಗಣ್ಯಾತಿಗಣ್ಯರ ದಂಡೇ ಮೈದಾನದಲ್ಲಿ ನೆರೆದಿದೆ.
 

 
ಇಂದು ಮುಂಜಾನೆಯಿಂದ ಪ್ರಾರಂಭವಾದ ವಿವಾಹದ ವಿಧಿ ವಿಧಾನಗಳು ವಾದ್ಯಘೋಷಗಳ ಹಿಮ್ಮೇಳದ ಜತೆ ಮುಂದುವರೆಯುತ್ತಿವೆ. 9.30ರ ಶುಭ ಲಗ್ನದಲ್ಲಿ ಡಾಕ್ಟರ್ ದಿಲೀಪ್ ನಿರುಪಮಾ ಕೊರಳಿಗೆ ತಾಳಿ ಕಟ್ಟುವ ಮೂಲಕ 8 ವರ್ಷಗಳ ಗೆಳತಿಯನ್ನು ಸತಿಯಾಗಿ ಸ್ವೀಕರಿಸಿದರು. ನಂತರ ಸಪ್ತಪದಿ ತುಳಿದ ವಧುವರರು ತಂದೆ- ತಾಯಿಗಳು ಸೇರಿದಂತೆ ಹಿರಿಯರ ಆರ್ಶೀರ್ವಾದವನ್ನು ಪಡೆದರು. 
 
ಹಿರಿಯ ನಟರಾದ ರಾಜೇಶ್, ತೆಲುಗು ಚಿತ್ರರಂಗದ ಹಿರಿಯ ನಟ ಹರಿಕೃಷ್ಣ, ತಮಿಳು ನಟ ಶಿವಾಜಿ ಪ್ರಭು, ನಟಿ ಅಂಬಿಕಾ, ಹಿರಿಯ ನಟಿ ಭಾರತೀ ವಿಷ್ಣುವರ್ಧನ್, ತಾರಾ, ಸುದೀಪ್, ಗಣೇಶ್, ರಕ್ಷಿತಾ-ಪ್ರೇಮ್ ದಂಪತಿಗಳು, ದರ್ಶನ್ ಸೇರಿದಂತೆ ಕಾಲಿವುಡ್-ಟಾಲಿವುಡ್- ಸ್ಯಾಂಡಲ್‌ವುಡ್ ಚಿತ್ರರಂಗದ ಘಟಾನುಘಟಿಗಳು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. 
 
ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮಕ್ಕೆ ಬಿಗ್ ಬಿ ಅಮಿತಾಬ್ ತಮ್ಮ ಸೊಸೆ, ಕನ್ನಡತಿ ಐಶ್ವರ್ಯ ಜತೆ ಬರುವ ಸಾಧ್ಯತೆ ಇದೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್‍ಹಾಸನ್, ಧನುಷ್, ಪ್ರಭು, ಮೆಗಾಸ್ಟಾರ್, ನಾಗಾರ್ಜುನ ಮತ್ತು ಎನ್.ಟಿ ಆರ್ ಕುಟುಂಬ ಸಹ  ಸಂಜೆಯ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಊಹಿಸಲಾಗಿದೆ.
 
ತಮ್ಮ ಮಗಳು ಡಾ.ನಿರುಪಮ ಮತ್ತು ಡಾ.ದೀಲಿಪ್ ಅವರ ವಿವಾಹದ ಪ್ರತಿಯೊಂದು ಕ್ಷಣವನ್ನು ನಾಡಿನಾದ್ಯಂತ ಇರುವ ಅಭಿಮಾನಿಗಳಿಗೆ ತಲುಪಿಸುವ ಸಲುವಾಗಿಯೇ ವೆಬ್ ಸೈಟ್ ಆರಂಭಿಸಿದ್ದ ಶಿವಣ್ಣ, ಆ ವೆಬ್ ಸೈಟಿನಲ್ಲಿ ಮದುವೆ ಪೋಟೊಗಳು, ವಿಡಿಯೋಗಳನ್ನು ಹಾಕಿದ್ದಾರೆ. 

Share this Story:

Follow Webdunia kannada