Select Your Language

Notifications

webdunia
webdunia
webdunia
webdunia

ಫಸ್ಟ್ ಡೇ ಫಸ್ಟ್ ಶೋಗೆ ಶಿವಣ್ಣ ಹಾಜರ್

ಫಸ್ಟ್ ಡೇ ಫಸ್ಟ್ ಶೋಗೆ ಶಿವಣ್ಣ ಹಾಜರ್
, ಶುಕ್ರವಾರ, 4 ಸೆಪ್ಟಂಬರ್ 2015 (09:26 IST)
ಸ್ಯಾಂಡಲ್ ವುಡ್ ನಲ್ಲಿ ಈಗ ಶಿವಣ್ಣಂದೇ ಮಾತು. ಯಾರ ಬಾಯಲ್ಲಿ ಕೇಳಿದ್ರೂ ಅಬ್ಬಾ ಮಗಳ ಮದುವೆಯನ್ನ ಎಷ್ಟು ಅದ್ದೂರಿಯಾಗಿ ಮಾಡಿ ಮುಗಿಸಿದ್ರಪ್ಪ ಅನ್ನೋ ಮಾತು ಹರಿದಾಡ್ತಿದೆ. ಈಗ ಮಗಳ ಮದುವೆ ಮುಗಿಯುತ್ತಿದ್ದಂತೆ ಎಂದಿನಂತೆ ಚಿತ್ರಗಳ ಶೂಟಿಂಗ್ ಹಾಗೂ  ಇತರೆ ಕೆಲಸಗಳಲ್ಲಿ ಶಿವಣ್ಣ ತಮ್ಮನ್ನ ತೊಡಗಿಸಿಕೊಳ್ತಿದ್ದಾರೆ.  ಮಗಳನ್ನ ಗಂಡನ ಮನೆಗೆ ಸೇರಿಸಿ ಬಂದಿರೋ ಹ್ಯಾಟ್ರಿಕ್ ಹೀರೋ ಮತ್ತೆ ಬ್ಯುಸಿಯಾಗಿದ್ದಾರೆ.
ನಿರ್ದೇಶಕ ಶ್ರೀಜೈ ಆಕ್ಷನ್-ಕಟ್ ಹೇಳಿರುವ ದುನಿಯಾ ವಿಜಯ್ ಹಾಗೂ ಆಕಾಂಕ್ಷ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರೋ ಈ ವರ್ಷದ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ ಆರ್ ಎಕ್ಸ್ ಸೂರಿ ಇಂದು ತೆರೆಗೆ ಅಪ್ಪಳಿಸಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಪಾಲಿ ಚಿತ್ರಮಂದಿರದಲ್ಲಿ ನಾಯಕ ನಟ ದುನಿಯಾ ವಿಜಯ್ ಅವರೊಂದಿಗೆ ಬೆಳಿಗ್ಗೆ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಲಿದ್ದಾರೆ. ಕುಖ್ಯಾತ ರೌಡಿ ಸೂರಿಯ ನಿಜ ಜೀವನದ ಕಥೆಯನ್ನಾಧರಿಸಿದ ಆರ್ ಎಕ್ಸ್ ಸೂರಿ ಈಗಾಗಲೇ ಗಾಂಧಿನಗರದಲ್ಲಿ ಹವಾ ಕ್ರಿಯೆಟ್ ಮಾಡಿದೆ. ಚಿತ್ರದ ಟೀಸರ್ ಹೂಗೂ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡುಗಳಿಗೆ ವಿಜಯ್ ಅಭಿಮಾನಿಗಳು ಸಖತ್ ರೆಸ್ಪಾನ್ಸ್ ಮಾಡಿದ್ರು. 
 
ಆರ್ ಎಕ್ಸ್ ಸೂರಿ ಬಿಡುಗಡೆಗೆ ಮುನ್ನವೇ ಸಾಕಷ್ಟು ಸೌಂಡ್ ಮಾಡಿತ್ತು. ಓಂ ಸಿನಿಮಾದಲ್ಲಿ ಶಿವಣ್ಣ ಕೂಡ ರಿಯಲ್ ಪಾತ್ರದಲ್ಲಿ ನಟಿಸಿ ಚರಿತ್ರೆ ಬರೆದಿದ್ರು. ಇದೀಗ ದುನಿಯಾ ವಿಜಿ ಸರದಿ. ಆದ್ರೆ ಆರ್ ಎಕ್ಸ್ ಸೂರಿ ಕೂಡಾ ಓಂ ಸಿನಿಮಾದ ರೀತಿ ದಾಖಲೆಗಳನ್ನ ಸೃಸ್ಟಿಸಿ ಚರಿತ್ರೆಯ ಪುಟ ಸೇರುತ್ತಾ ಅನ್ನೋದನ್ನ ಕಾದುನೋಡ್ಬೇಕಿದೆ.

Share this Story:

Follow Webdunia kannada