Select Your Language

Notifications

webdunia
webdunia
webdunia
webdunia

ಮತ್ತೆ ತೆರೆ ಮೆಲೆ ಕಾಣಿಸಿಕೊಳ್ಳಲಿರುವ ಶಿವಣ್ಣ-ಸುಧಾ...?

ಮತ್ತೆ ತೆರೆ ಮೆಲೆ ಕಾಣಿಸಿಕೊಳ್ಳಲಿರುವ ಶಿವಣ್ಣ-ಸುಧಾ...?
, ಶುಕ್ರವಾರ, 30 ಜನವರಿ 2015 (09:48 IST)
ಸೆಂಚುರಿ ಸ್ಟಾರ್  ಡಾ. ಶಿವ ರಾಜ್ ಕುಮಾರ್ ಮತ್ತು ಸುಧಾರಾಣಿ ಮತ್ತೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದರೆ ಈ ಜೋಡಿ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರಾ ಒಟ್ಟಿಗೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದರೆ ಆ ಸಂಗತಿ ಹೇಳುವ ಮುನ್ನ ಈ ಜೋಡಿ ಹಿಂದಿನ ಸಿನಿಮಾಗಳ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ. ಎಲ್ಲರಿಗೂ ಗೊತ್ತಿರುವ ಹಾಗೆ ಶಿವಣ್ಣನ ಅನೇಕ ಚಿತ್ರಗಳಲ್ಲಿ ನಟಿ ಸುಧಾರಾಣಿ ಅಭಿನಯಿಸಿದ್ದಾರೆ.


ಆನಂದ್, ಮನಮೆಚ್ಚಿದ ಹುಡುಗಿ, ರಣರಂಗ ಹೀಗೆ ಹತ್ತು ಹಲವಾರು. ಈಗ ಆಕೆಯ ಬಗ್ಗೆ ಹೇಳುವುದಾದರೆ, ಈಗ ಆಕೆ ಆಗಾಗ ಚಿತ್ರಗಳಲ್ಲಿ ನಟಿಸುತ್ತಾ ಇದ್ದಾರೆ. ಆದರೆ ಶಿವಣ್ಣ ಈಗಲೂ ಕನ್ನಡದ ಸ್ಟಾರ್ ಹೀರೋ ಆಗಿ ತೆರೆಯ ಮೇಲೆ ಮಿಂಚುತ್ತಿದ್ದಾರೆ. ಶಿವಣ್ಣ ಮತ್ತು ಸುಧಾರಾಣಿ  ಇತ್ತೀಚಿಗೆ ಒಟ್ಟಿಗೆ ತೆರೆ ಹಂಚಿಕೊಂಡ ಚಿತ್ರ ಬೆಳ್ಳಿ. ಅದಾದ ಬಳಿಕ ಈ ಪ್ರಸಿದ್ಧ ಜೋಡಿ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಟೀವಿ ಜಾಹೀರಾತು ಒಂದಕ್ಕೆ ದಂಪತಿಗಳಾಗಿ ಇಂತದ್ದೇ ಅಂಗಡಿಯ ಆಭರಣಗಳನ್ನು   ಕೊಳ್ಳಿ ಎಂದು ಹೇಳುತ್ತಾರಂತೆ. ಇಷ್ಟ ಪಟ್ಟವರು ಅವರು ಹೇಳಿದ ಆಭರಣಗಳನ್ನು ಕೊಳ್ಳ ಬಹುದು.. ಆಯ್ಕೆ ನಿಮ್ಮದು !!  

Share this Story:

Follow Webdunia kannada