ನಿಮ್ಮ ಮನೆ ವಿಚಾರವೇ ನಿಮಗೆ ಗೊತ್ತಿಲ್ಲ ಅಂದ್ರೆ ಎಲೆಕ್ಷನ್ ಗೆದ್ದು ಏನು ಮಾಡ್ತಿದ್ರಿ ಎಂದು ಶಿವರಾಜ್ ಕುಮಾರ್ ನೆಟ್ಟಿಗರು ಟ್ರೋಲ್

Krishnaveni K
ಮಂಗಳವಾರ, 11 ಜೂನ್ 2024 (11:20 IST)
ಬೆಂಗಳೂರು: ಡಾ ರಾಜ್ ಕುಮಾರ್ ಕುಟುಂಬದಲ್ಲಿ ಈಗ ಯುವರಾಜ್ ಕುಮಾರ್ ವಿಚ್ಛೇದನ ವಿಚಾರ ಬಿರುಗಾಳಿ ಎಬ್ಬಿಸಿದೆ. ಶಿವರಾಜ್ ಕುಮಾರ್ ಮಾಧ್ಯಮಗಳ ಮುಂದೆ ನನಗೆ ಈ ವಿಚಾರದ ಬಗ್ಗೆ ಏನೂ ಗೊತ್ತಿಲ್ಲ ಎಂದಿದ್ದಕ್ಕೆ ಈಗ ಟ್ರೋಲ್ ಗೊಳಗಾಗಿದ್ದಾರೆ.

ಯುವರಾಜ್ ಕುಮಾರ್ ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನ ನೋಟಿಸ್ ನೀಡಿದ್ದಾರೆ. ಇಬ್ಬರ ದಾಂಪತ್ಯದಲ್ಲಿ ಭಾರೀ ಕೋಲಾಹಲವೆದ್ದಿದೆ. ಶ್ರೀದೇವಿ ವಿರುದ್ಧ ಯುವರಾಜ್ ಅಕ್ರಮ ಸಂಬಂಧದ ಆರೋಪ ಹೊರಿಸಿದ್ದರು. ಇತ್ತ ಶ್ರೀದೇವಿ ಕೂಡಾ ಯುವರಾಜ್ ವಿರುದ್ಧ ನಟಿಯೊಬ್ಬರ ಜೊತೆ ಆಪ್ತರಾಗಿದ್ದರು ಎಂದು ಆಪಾದಿಸಿದ್ದರು.

ಈ ಎಲ್ಲಾ ವಿಚಾರಗಳು ಭಾರೀ ಸದ್ದು ಮಾಡುತ್ತಿದ್ದರೆ ಇತ್ತ ಮಾಧ್ಯಮಗಳು ದೊಡ್ಮನೆ ಹಿರಿಯ ಮಗ ಶಿವರಾಜ್ ಕುಮಾರ್ ಬಳಿ ಈ ವಿಚಾರ ನಿಮಗೆ ಗೊತ್ತಿತ್ತಾ? ನೀವು ಮಧ್ಯಸ್ಥಿಕೆ ವಹಿಸಿ ಮಾತುಕತೆ ಮಾಡ್ತೀರಾ ಎಂದು ಪ್ರಶ್ನಿಸಿದ್ದವು. ಆದರೆ ಇದಕ್ಕೆ ಉತ್ತರಿಸಿದ್ದ ಶಿವರಾಜ್ ಕುಮಾರ್ ನನಗೆ ಈ ವಿಚಾರವೇ ಗೊತ್ತಿಲ್ಲ. ಗೊತ್ತಿಲ್ಲದೇ ಪ್ರತಿಕ್ರಿಯಿಸುವುದು ತಪ್ಪಾಗುತ್ತದೆ ಎಂದು ಸಮಜಾಯಿಷಿ ನೀಡಿದ್ದರು.

ಆದರೆ ಇದೇ ವಿಚಾರಕ್ಕೆ ಅವರೀಗ ಟ್ರೋಲ್ ಗೊಳಗಾಗಿದ್ದಾರೆ. ನಿಮ್ಮ ಮನೆ ವಿಚಾರವೇ ನಿಮಗೆ ಗೊತ್ತಿಲ್ಲ ಎಂದರೆ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಪತ್ನಿ ಗೆದ್ದಿದ್ದರೆ ನಿಮ್ಮ ಕ್ಷೇತ್ರದ ಬಗ್ಗೆ ನೀವು ಎಷ್ಟರಮಟ್ಟಿಗೆ ತಿಳಿದುಕೊಂಡು ಕೆಲಸ ಮಾಡುತ್ತಿದ್ದಿರಿ ಎಂಬುದು ನಮಗೆ ಗೊತ್ತಾಯಿತು. ನೀವು ಸೋತಿದ್ದೇ ಒಳ್ಳೆದಾಯ್ತು ಎಂದು ಟ್ರೋಲ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಒಳ್ಳೆ ಪಾತ್ರ ಸಾಯಿಸೋದು ಎಷ್ಟು ಸರಿ: ಲಕ್ಷ್ಮೀ ನಿವಾಸ ಸೀರಿಯಲ್ ವಿರುದ್ಧ ಸಿಡಿದೆದ್ದ ಹಿರಿಯ ನಟಿ

ರಿಷಬ್ ಶೆಟ್ಟಿ ಜೊತೆ ಸರಿಯಿಲ್ವಾ, ಏನಾಗಿದೆ: ರಾಜ್ ಬಿ ಶೆಟ್ಟಿ ಕೊನೆಗೂ ಕೊಟ್ರು ಮಾಹಿತಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ಇಂದಿನಿಂದ: ರೇಣುಕಾ ಪೋಷಕರ ಹೇಳಿಕೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುತ್ತಾ

OG ನಟನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ನಟ, ಡಿಸಿಎಂ ಪವನ್ ಕಲ್ಯಾಣ್

ಎಂಎಸ್‌ ಸುಬ್ಬುಲಕ್ಷ್ಮಿ ಜೀವನಚರಿತ್ರೆಯ ಪಾತ್ರಕ್ಕೆ ಸಾಯಿಪಲ್ಲವಿ

ಮುಂದಿನ ಸುದ್ದಿ
Show comments