Webdunia - Bharat's app for daily news and videos

Install App

ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಲು ಶಾರೂಖ್ ಸಿದ್ಧ...?!

Webdunia
ಸೋಮವಾರ, 2 ಮಾರ್ಚ್ 2015 (10:15 IST)
ಒಂದು ಕ್ಷೇತ್ರದಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಕೆಲಸ ಮಾಡುತ್ತಾ ಬದುಕನ್ನು ಕಂಡು ಕೊಂಡಾತ ಇಪ್ಪತ್ತೈದು ವರ್ಷಗಳ ಬಳಿಕ ತನ್ನ ಶೈಲಿಯಲ್ಲಿ ಬದಲಾವಣೆ, ಮಾಡಿಕೊಳ್ಳ ಬೇಕಾಗಿ ಬಂದರೆ ? ಅದರಲ್ಲೂ ಚಿತ್ರರಂಗದ ಟಾಪ್ ಹೀರೋಗೆ ಆ ರೀತಿಯ ಪರಿಸ್ಥಿತಿ ಎದುರಾದರೆ ? ಈಗ ಅಂತಹ ಒಂದು ಪರಿಸ್ಥಿತಿ ಎದುರಿಸುತ್ತಿದ್ದಾರೆ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್. ಅದಕ್ಕಾಗಿ ಸಾಕಷ್ಟು ಕಷ್ಟ ಪಡುವಂತಾಗಿದೆ ಅವರಿಗೆ. 
ಮನೀಶ್ ಶರ್ಮ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಫ್ಯಾನ್ ಎನ್ನುವ ಚಿತ್ರಕ್ಕಾಗಿ ಶಾರೂಖ್ ಖಾನ್ ಈ ರೀತಿಯ ಪಡಿಪಾಟಲು ಪಡುತ್ತಿದ್ದಾರಂತೆ. ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವವರೆಲ್ಲರು ಆತನ ಫ್ಯಾನ್‌ಗಳೇ ಆಗಿದ್ದಾರೆ. ಆದ್ದರಿಂದ ಆತ ಯಾವುದೇ ಸನ್ನಿವೇಶದಲ್ಲಿ ನಟಿಸಿದರೂ ಸಹಿತ ಈ ಮೊದಲು ಅಂತಹ ಪಾತ್ರ, ನಟನಾ ಶೈಲಿ ಮಾಡಿರುವುದಾಗಿ ಹೇಳುತ್ತಾ ಬೇಡ ಬೇಡ ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ಈಗಾಗಲೇ ನೀವು ಆ ರೀತಿ ಮಾಡಿದ್ದಾಗಿದೆ, ಹೊಸದಾಗಿ ಮಾಡೋಣ ಎಂದು ಹೇಳುತ್ತಿದ್ದಾರೆ.  
 
ಈ ಕಾರಣದಿಂದ ಶಾರೂಖ್ ಖಾನ್ ಮತ್ತೊಮ್ಮೆ ಹೊಸದಾಗಿ ಶಾಲೆಗೆ ಸೇರಿದಂತಾಗಿದೆ. ಫ್ಯಾನ್‌ನಲ್ಲಿ ನಾನು ಹೊಸದಾಗಿ ರೂಪುಗೊಳ್ಳುತ್ತಿದ್ದೇನೆ ಎಂದು ಶಾರೂಖ್ ಖಾನವರು ತಿಳಿಸಿದ್ದಾರೆ. ಒಂದು ಕ್ಷೇತ್ರದಲ್ಲಿ ಇಪ್ಪೈತ್ತೈದು ವರ್ಷಗಳ ಕಾಲ ಇದ್ದರೂ  ಈಗ ಹೊಸತನ್ನು ನೀಡಲು ಪಡಬೇಕಾದ ಪ್ರಯತ್ನವು ಹೆಚ್ಚು ವಿಶೇಷವಾಗಿದೆ ಎನ್ನುವ ಮಾತನ್ನು ಈ ಸಮಯದಲ್ಲಿ ಅವರು ತಿಳಿಸಿದ್ದಾರೆ.
 
ಈ ಚಿತ್ರದಲ್ಲಿ ಶಾರೂಖ್ ಖಾನ್ ಓರ್ವ ಸೂಪರ್ ಸ್ಟಾರ್ ಮತ್ತು ಓರ್ವ ಅಭಿಮಾನಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಾಜಿ ಮಾಡೆಲ್ ವಲೂಸ್ಪ ಡಿಸೋಜ ಸಹಿತ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮವಯಸ್ಕರು ಏನಾದರೂ ಸಲಹೆ ನೀಡಿದರೆ ನನಗೆ ಇಷ್ಟ ಆಗದು.
 
ಆದರೆ ಚಿಕ್ಕವರು, ಯುವಕರು ನೀಡಿದ ಸಲಹೆಗಳನ್ನು ನಾನು ತಪ್ಪದೆ ಅನುಸರಿಸುತ್ತೇನೆ ಎಂದಿದ್ದಾರೆ ಶಾರೂಖ್ ಖಾನ್. ಮನೀಶ್ ಶರ್ಮಾ, ರಾಹುಲ್ ಧೋಲಾಕಿಯರಂತಹ ಯುವ  ನಿರ್ದೇಶಕರ ಜೊತೆ ಕೆಲಸ ಮಾಡುವಾಗ ಹೊಸ ಪ್ರಪಂಚಕ್ಕೆ ಬಂದಂಗೆ ಅನ್ನಿಸುತ್ತಿದೆ ಎಂದಿದ್ದಾರೆ. ದ್ವಿಪಾತ್ರ ಇರುವುದರಿಂದ ಇದರಲ್ಲಿ ಇಬ್ಬರು ಹೊಸ ಶಾರೂಖ್ ಖಾನ್ ಅವರನ್ನು ಕಾಣುವ ಸೌಭಾಗ್ಯ ಅವರ ಅಭಿಮಾನಿಗಳಿಗೆ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments