Select Your Language

Notifications

webdunia
webdunia
webdunia
webdunia

ಬಾಹುಬಲಿ ತಂಡಕ್ಕೆ ಧನ್ಯವಾದ ಅರ್ಪಿಸಿದ ಶಾರುಖ್ ಖಾನ್

ಬಾಹುಬಲಿ ತಂಡಕ್ಕೆ ಧನ್ಯವಾದ ಅರ್ಪಿಸಿದ ಶಾರುಖ್ ಖಾನ್
, ಸೋಮವಾರ, 3 ಆಗಸ್ಟ್ 2015 (10:33 IST)
ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಹಾಲಿವುಡ್ ಸ್ಟಾರ್ ಗಳು ನಿರ್ದೇಶಕರು, ತಂತ್ರಜ್ಞರು ಕೂಡ ಸಿನಿಮಾ ನೋಡಿ ಭೇಷ್ ಎಂದಿದ್ದಾರೆ. ಹೀಗಿರುವಾಗಲೇ ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾ ನೋಡಿ ಫುಲ್ ಖುಷಿಯಾಗಿದ್ದಾರೆ.
ಈಗಷ್ಟೇ ಬಲ್ಗೇರಿಯಾದಿಂದ ದಿಲ್ ವಾಲೇ ಶೂಟಿಂಗ್ ಮುಗಿಸಿ ಮುಂಬೈಗೆ ವಾಪಾಸ್ಸಾಗಿರುವ  ಶಾರುಖ್ ಬಾಹುಬಲಿ ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಖುಷಿಯನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಶಾರುಖ್ ಹಂಚಿಕೊಂಡಿದ್ದಾರೆ.  ಬಾಹುಬಲಿ ಚಿತ್ರ ನೋಡಿ ನನಗೆ ತುಂಬಾನೇ ಖುಷಿಯಾಗಿದೆ. ಇದರಲ್ಲಿರುವ ಪ್ರತಿ ಪಾತ್ರಗಳನ್ನು ಕೂಡ ಎಲ್ಲರೂ ಬಹಳ ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಆ ಮೂಲಕ ಅವರ ಎಲ್ಲರಿಗೂ ಸ್ಫೂರ್ತಿ ತುಂಬಿದ್ದಾರೆ ಅಂತಾ ಶಾರುಖ್ ಹೇಳಿದ್ದಾರೆ. ಅಲ್ಲದೇ ಅಧಿಕ ಶ್ರಮ ಪಟ್ಟಾಗ ಮಾತ್ರ ಯಶಸ್ಸು ಸಿಗುತ್ತದೆ ಅಂತಾ ಅವರು ಹೇಳಿದ್ದಾರೆ.
 
ಇನ್ನು ತಮ್ಮ ದಿಲೇವಾಲೇ ಸಿನಿಮಾದ ಬಗ್ಗೆ ಹೇಳಿರುವ ಶಾರುಖ್ ಬಲ್ಗೇರಿಯಾದಲ್ಲಿ ಶೂಟಿಂಗ್ ವೇಳೆ ತಮ್ಮ ಕುಟುಂಬವನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದೆ ಎಂದಿದ್ದಾರೆ. ಏನೇ ಇರಲಿ ಶಾರುಖ್ ಬಾಹುಬಲಿ ಸಿನಿಮಾವನ್ನು ಕೊಂಡಾಡಿದ್ದು, ಬಾಹುಬಲಿ ಟೀಮ್ ಗಂತೂ ಖುಷಿ ಕೊಟ್ಟಿದೆ.

Share this Story:

Follow Webdunia kannada