Select Your Language

Notifications

webdunia
webdunia
webdunia
webdunia

ರಜನಿ ಮುರುಗನ್ ಕನ್ನಡ ರಿಮೇಕ್ ನಲ್ಲಿ ಶರಣ್ ಅಭಿನಯ

ರಜನಿ ಮುರುಗನ್ ಕನ್ನಡ ರಿಮೇಕ್ ನಲ್ಲಿ ಶರಣ್ ಅಭಿನಯ
, ಬುಧವಾರ, 10 ಫೆಬ್ರವರಿ 2016 (11:17 IST)
ಅಧ್ಯಕ್ಷ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆಯನ್ನು ಹುಟ್ಟಿ ಹಾಕಿದ ಪ್ರತಿಭಾವಂತ ಶರಣ್. ಶರಣ್ ಅಭಿನಯಿಸಿದ್ದ ಅಧ್ಯಕ್ಷ ಸಿನಿಮಾ ತಮಿಳಿನ ಸಿನಿಮಾವೊಂದರ ರಿಮೇಕ್ . ಇದು ಅವರಿಗೆ ಭರ್ಜರಿ ಯಶಸ್ಸನ್ನು ತಂದುಕೊಟ್ಟಿತ್ತು. ಇದೀಗ ಶರಣ್ ಮತ್ತೊಂದು ತಮಿಳಿನ ರಿಮೇಕ್ ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ರೆಡಿಯಾಗಿದ್ದಾರೆ.

ತಮಿಳಿನಲ್ಲಿ ಪೊನ್ ರಾಮ್ ಎಂಬವರು ನಿರ್ದೇಶಿಸಿದ್ದ ರಜನಿ ಮುರುಗನ್ ಸಿನಿಮಾವನ್ನು ನಿರ್ಮಾಪಕ ರಾಮು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶರಣ್ ಅಭಿನಯಿಸಲು ಸಿದ್ಧ ಎಂದಿದ್ದಾರೆ.ಈ ಸಿನಿಮಾ ತಮಿಳಿನಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿತ್ತು.ಈ ಹಿಂದೆ ಶರಣ್ ಅಭಿನಯಿಸಿದ್ದ ರಾಜ ರಾಜೇಂದ್ರ ಹಾಗೂ ಬುಲೆಟ್ ಬಸ್ಯಾ ಸಿನಿಮಾಗಳು ಅವರಿಗೆ ಯಶಸ್ಸು ತಂದುಕೊಡಲಿಲ್ಲ. ಆದ್ದರಿಂದ ಈ ಸಿನಿಮಾದ ಬಗ್ಗೆ ಅವರಿಗೆ ಭಾರೀ ನಿರೀಕ್ಷೆಯಿದೆ.
 
ಸದ್ಯ ಶರಣ್ ಕೊರಿಯಾಗ್ರಾಫರ್ ಹರ್ಷ ನಿರ್ದೇಶಿಸುತ್ತಿರುವ ಮಾರುತಿ 800 ಹಾಗೂ ಪವನ್ ಒಡೆಯರ್ ಅವರ ನಟರಾಜ ಸರ್ವೀಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ರಿಲೀಸ್ ಆದ ತಕ್ಷಣವೇ ರಜನಿ ಮುರುಗನ್ ಸಿನಿಮಾದ ರಿಮೇಕ್ ನಲ್ಲಿ ಶರಣ್ ಅಭಿನಯಿಸುತ್ತಾರೆ ಅಂತಾ ಹೇಳಲಾಗ್ತಿದೆ.
 

Share this Story:

Follow Webdunia kannada