Select Your Language

Notifications

webdunia
webdunia
webdunia
webdunia

ಮಲೇಷಿಯಾದಲ್ಲಿ ಶರಣ್ ಹಾಗೂ ಶೃತಿ ಹರಿಹರನ್

ಮಲೇಷಿಯಾದಲ್ಲಿ ಶರಣ್ ಹಾಗೂ ಶೃತಿ ಹರಿಹರನ್
, ಮಂಗಳವಾರ, 5 ಜನವರಿ 2016 (10:35 IST)
ಶರಣ್ ಹಾಗೂ ಶೃತಿ ಹರಿಹರನ್ ಅಭಿನಯದ ಮಾರುತಿ 800 ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಸಿನಿಮಾ ಹಾಡುಗಳ ಚಿತ್ರೀಕರಣಕ್ಕಾಗಿ ಮಲೇಷಿಯಾಗೆ ಹಾರಿದ್ದು, ಈ ಬಾರಿಯ ನ್ಯೂ ಇಯರ್ ನ್ನು ಕೂಡ ಸಿನಿಮಾ ತಂಡ ಅಲ್ಲೇ ಆಚರಿಸಿಕೊಂಡಿದೆ.

 
ಮಲೇಷಿಯಾದಲ್ಲಿ ಹತ್ತು ದಿನಗಳ ಕಾಲ ಸಿನಿಮಾದ ಹಾಡುಗಳ ಶೂಟಿಂಗ್ ನಡೆಯಲಿದೆ.ಈಗಾಗೇ ಶರಣ್ ಹಾಗೂಶೃತಿ ಹರಿಹರನ್ ನಡುವಿನ ರೋಮ್ಯಾಂಟಿಕ್ ಹಾಡುಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ.ಸಿನಿಮಾದ ಎರಡು ಹಾಡುಗಳಿಗೆ ಈ ಸಿನಿಮಾದ ನಿರ್ದೇಶಕರೂ ಆಗಿರುವ ಹರ್ಷ ಅವರೇ ಕೊರಿಯಾಗ್ರಫಿ ಮಾಡುತ್ತಿದ್ದಾರೆ. ಮಾರುತಿ 800 ಸಿನಿಮಾದ ಹೆಚ್ಚಿನ ಭಾಗದ ಶೂಟಿಂಗ್ ನ್ನು ಉತ್ತರ ಕರ್ನಾಟಕದಲ್ಲಿ ಮಾಡಲಾಗಿದೆ.ಜನವರಿ ಮೂರನೇ ವಾರದ ವೇಳೆಗೆ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಲಿದೆಯಂತೆ.
 
ಇನ್ನು ಈ ಸಿನಿಮಾವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದು, ಈ ಹಿಂದೆ ಭಜರಂಗಿ ಹಾಗೂ ವಜ್ರಕಾಯ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾಗಳಲ್ಲಿ ದೇವರ ಹೆಸರುಗಳನ್ನು ಇಟ್ಟಿದ್ದ ಮಾರುತಿ 800 ಸಿನಿಮಾಕ್ಕೂ ಹನುಮಂತನ ಹೆಸರಿಟ್ಟಿದ್ದಾರೆ. ಹನುಮಂತ ಭಕ್ತನಿಗೆಷ್ಟು ಒಲಿಯುತ್ತಾನೆ ಅನ್ನೋದು ಸಿನಿಮಾ ಬಿಡುಗಡೆಯಾದ ಬಳಿಕವಷ್ಟೇ ಗೊತ್ತಾಗಲಿದೆ.

Share this Story:

Follow Webdunia kannada