Select Your Language

Notifications

webdunia
webdunia
webdunia
webdunia

ಫ್ಯಾಶನ್ ಶೋದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ ಶಾಹೀದ್ ಹಾಗೂ ಮೀರಾ

ಫ್ಯಾಶನ್ ಶೋದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ ಶಾಹೀದ್ ಹಾಗೂ ಮೀರಾ
, ಸೋಮವಾರ, 31 ಆಗಸ್ಟ್ 2015 (11:11 IST)
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಶಾಹೀದಾ ಹಾಗೂ ಮೀರಾ ಜೊತೆಯಾಗಿ ಕಾಣಿಸಿಕೊಂಡಿದ್ದು ತೀರಾ ಅಪರೂಪ. ಆದ್ರೆ ಮೊನ್ನೆ ಶಾಹೀದ್ ಅಭಿಮಾನಿಗಳಿಗೆ ದಂಪತಿಯನ್ನು ಒಟ್ಟಿಗೆ ನೋಡುವ ಅವಕಾಶ  ಕೂಡಿ ಬಂದಿತ್ತು. ಫ್ಯಾಶನ್ ಶೋ ಒಂದರಲ್ಲಿ ಶಾಹೀದ್ ಹಾಗೂ ಮೀರಾ ರಜಪೂತ್ ಜೊತೆಯಾಗಿ ಹೆಜ್ಜೆ ಹಾಕಿದ್ರು.

ಖ್ಯಾತ ಫ್ಯಾಶನ್ ಡಿಸೈನರ್ ಮಸಬಾ ಅವರು ಆಯೋಜಿಸಿದ್ದ ಲ್ಯಾಕ್ಮಿ ಫ್ಯಾಶನ್ ವೀಕ್‌ನಲ್ಲಿ ದಂಪತಿ ಜೊತೆಯಾಗಿ ಕಾಣಿಸಿಕೊಂಡ್ರು. ಇನ್ನು ಕಪ್ಪು ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ನಲ್ಲಿ ಮಿಂಚಿದ್ರೆ, ಪತಿಗೆ ಪರ್ಫೆಕೆಟ್ ಮ್ಯಾಚ್ ಆಗುವಂತೆ ಮೀರಾ ಕೂಡ ಬ್ಲ್ಯಾಕ್ ಡ್ರೆಸ್ ನಲ್ಲೇ ಕ್ಯಾಮರಾಗೆ ಪೋಸ್ ಕೊಟ್ರು.
 
ಇನ್ನು  ಫ್ಯಾಸನ್ ಶೋದಲ್ಲಿ ತಾರೆಯರ ಸಮಾಗಮವೇ ಆಗಿತ್ತು. ನಟಿ ಮಂದಿರಾ ಬೇಡಿ, ದಿಯಾ ಮಿರ್ಜಾ ಕೂಡ ಫ್ಯಾಶನ್ ಶೋದಲ್ಲಿ ಭಾಗವಹಿಸಿ ರಂಗು ತುಂಬಿದ್ರು. ಒಟ್ಟಿನಲ್ಲಿ ಫ್ಯಾಶನ್ ಶೋದಲ್ಲಿ ಶಾಹೀದ್ ಪತ್ನಿ ಸಮೇತ ಭಾಗವಹಿಸಿದ್ದು ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.

Share this Story:

Follow Webdunia kannada