Select Your Language

Notifications

webdunia
webdunia
webdunia
webdunia

ಮುಂದಿನ ವಾರ ತೆರೆಗೆ ಬರಲಿದೆ ಸೆವೆನ್

ಮುಂದಿನ ವಾರ ತೆರೆಗೆ ಬರಲಿದೆ ಸೆವೆನ್
, ಮಂಗಳವಾರ, 13 ಅಕ್ಟೋಬರ್ 2015 (11:02 IST)
2008ರಲ್ಲಿ ಪಟ್ರೆ  ಲವ್ಸ್ ಪದ್ಮ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ಭರವಸೆ ಮೂಡಿಸಿದ ನಿರ್ದೇಶಕ ಚಂದ್ರಶೇಖರ್ ಶ್ರೀವಾತ್ಸವ್. ಬಳಿಕ 2011ರಲ್ಲಿ ಕಾಲಾಯ ತಸ್ಮೈ ನಮಃ ಅನ್ನೋ ಸಿನಾಮ ಮಾಡಿದ್ದರು. ಆದ್ರೆ ಸಿನಿಮಾ ಯಶಸ್ಸು ತಂದು ಕೊಡಲಿಲ್ಲ. 
ಆದ್ರೀಗ ನಾಲ್ಕು ವರ್ಷಗಳ ಬಳಿಕ ಚಂದ್ರಶೇಖರ್ ಮತ್ತೆ ಸಿನಿಮಾ ಮಾಡಿದ್ದಾರೆ. ಸೆವೆನ್ ಅನ್ನೋ ಸಿನಿಮಾದ ಮೂಲಕ ಅವರು ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಅಂದ್ಹಾಗೆ ಈ ಬಾರಿ ಚಂದ್ರಶೇಖರ್ ಕೇವಲ ನಿರ್ದೇಶಕನಾಗಿ ಬಂದಿಲ್ಲ. ಸಿನಿಮಾದ ನಾಯಕನಾಗಿಯೂ ಅವರೇ ಅಭಿನಯಿಸುತ್ತಿದ್ದಾರೆ. ಆ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಅವರು.
 
ಸಿನಿಮಾದಲ್ಲಿ ಚಂದ್ರಶೇಖರ್ ಗೆ ನಾಯಕಿಯಾಗಿ ರೂಪ ನಟರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ರಂಗಾಯಣ ರಘು, ರವಿಕಾಳೆ ಹೀಗೆ ಪ್ರಮುಖ ನಟರು ಕಾಣಿಸಿಕೊಂಡಿದ್ದಾರೆ. ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರು ಸಿನಿಮಾಗೆ ಎಷ್ಟು ಅಂಕ ನೀಡುತ್ತಾರೆ ಅನ್ನೋದನ್ನು ಕಾದು ನೋಡ್ಬೇಕು.

Share this Story:

Follow Webdunia kannada