Webdunia - Bharat's app for daily news and videos

Install App

ಅಜಯ್‌ ರಾವ್‌ರಿಂದ ಬೇರ್ಪಡುವ ನಿರ್ಧಾರದಿಂದ ಹಿಂದೆಸರಿದ ಸಪ್ನಾ

Sampriya
ಭಾನುವಾರ, 17 ಆಗಸ್ಟ್ 2025 (17:33 IST)
Photo Credit X
ಬೆಂಗಳೂರು: ಅಜಯ್ ರಾವ್ ವಿರುದ್ಧ ಕೌಟುಂಬಿಕ ಕಲಹದಡಿಯಲ್ಲಿ ಕೋರ್ಟ್‌ ಮೆಟ್ಟಿಲೇರಿದ ಬೆನ್ನಲ್ಲೇ ಪತ್ನಿ ಸಪ್ನಾ ಮತ್ತೇ ಹೊಂದಾಣಿಕೆಯಲ್ಲಿ ಜೀವನ ನಡೆಸಲು ನಿರ್ಧರಿಸಿದ್ದಾರೆ. 

ಈ ಬಗ್ಗೆ ಸಪ್ನಾ ಅವರು ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 
ಸ್ಯಾಂಡಲ್‌ವುಡ್‌ನ ನಟ ಅಜಯ್ ರಾವ್ ಅವರ ಪತ್ನಿ ಸಪ್ನ ವಿಚ್ಛೇದನ ಬಯಸಿ ಶನಿವಾರ ಅರ್ಜಿ ಸಲ್ಲಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಮತ್ತೆ ಹೊಂದಾಣಿಕೆ ಜೀವನ ನಡೆಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಸಪ್ನಾ ಪೋಸ್ಟ್‌ನಲ್ಲಿ ಹೀಗಿದೆ: 

ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯಕ್ಕಾಗಿ ನಾನು ಪ್ರತಿದಿನ ಧೈರ್ಯವನ್ನು ಕೂಡಿಸಿ, ನನಗೆ ತೀವ್ರವಾಗಿ ಪರೀಕ್ಷಿಸುವ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಪ್ರಿಯ ಸ್ನೇಹಿತರೇ ಮತ್ತು ಸಹೋದರರೇ. ಈ ಹಂತದಲ್ಲಿ ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್‌ನಿರ್ಮಿಸಿಕೊಳ್ಳಲು ಮತ್ತು ನಮ್ಮ ದಾಂಪತ್ಯ ಜೀವನವನ್ನು ಪುನಃ ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನು ನಿಮ್ಮಲಿ ಕೇಳಿಕೊಳ್ಳುತ್ತಿದೇನೆ ಮತ್ತು ನಾನು ಅತ್ಯಂತ ಗೌರವದಿಂದ ತಿಳಿಸಲು ಬಯಸುವುದೇನೆಂದರೆ, ಈ ವಿಷಯವು ನಮ್ಮ ವೈಯಕ್ತಿಕ, ಆಳವಾದ ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂಧಿಸಿದ್ದು ಹೊರತು ಬೇರೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ತಿಳಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಜಯ್‌ ರಾವ್‌ರಿಂದ ಬೇರ್ಪಡುವ ನಿರ್ಧಾರದಿಂದ ಹಿಂದೆಸರಿದ ಸಪ್ನಾ

ದರ್ಶನ್ ಪರ ಅಖಾಡಕ್ಕಿಳಿದ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಕಳುಹಿಸಿದ್ರು ಸ್ಪಷ್ಟ ಸಂದೇಶ

ಬಿಗ್‌ಬಾಸ್‌ ವಿನ್ನರ್‌, ಯುಟ್ಯೂಬರ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳಿಂದ ಗುಂಡಿನ ಮಳೆ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ಮುಂದಿನ ಸುದ್ದಿ
Show comments