Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್ ಜೊತೆ ಅಭಿನಯಿಸಲಿರುವ ಸಂಜನಾ

ಪವನ್ ಕಲ್ಯಾಣ್ ಜೊತೆ ಅಭಿನಯಿಸಲಿರುವ ಸಂಜನಾ
, ಬುಧವಾರ, 25 ನವೆಂಬರ್ 2015 (10:58 IST)
ಗಂಡ ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ಈಗ ಸಂತೋಷದ ಅಲೆಯಲ್ಲಿ ತೇಲಾಡುತ್ತಿದ್ದಾರಂತೆ. ಅವರ ಬಹು ದಿನದ ಕನಸು ನನಸಾಗುವ ಸಮಯ ಹತ್ತಿರ ಬಂದಿದ್ದರಿಂದ ಸದ್ಯ ಸಂಜನಾ ಅವರನ್ನು ಹಿಡಿಯೋದಕ್ಕೇನೇ ಆಗ್ತಿಲ್ಲವಂತೆ. ಅಂದ್ಹಾಗೆ ಸಂಜನಾ ಖುಷಿ ಕಾರಣ ಏನು ಅಂದ್ಕೊಂಡ್ರಾ ಅವರಿಗೆ ಪವನ್ ಕಲ್ಯಾಣ್ ಜೊತೆ ಅಭಿನಯಿಸೋ ಅವಕಾಶ ಒದಗಿ ಬಂದಿದೆ.

ಹೌದು...ಪವನ್ ಕಲ್ಯಾಣ್ ಅಭಿನಯಿಸುತ್ತಿರುವ ಸರ್ದಾರ್ ಗಬ್ಬರ್ ಸಿಂಗ್ ಸಿನಿಮಾದಲ್ಲಿ ಅಭಿನಯಿಸಲು ಸಂಜನಾಗೇ ಅವಕಾಶ ಸಿಕ್ಕಿದೆಯಂತೆ. ಇದು ಸಂಜನಾಗೇ ತುಂಬಾನೇ ಖುಷಿ ನೀಡಿದೆಯಂತೆ. ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿರುವ ಸಂಜನಾ ಅತ್ಯಂತ ರಾಯಲ್ ಲುಕ್‌ನಲ್ಲಿ ಮಿಂಚಲಿದ್ದಾರೆ. ಅಲ್ಲದೇ ಸಂಜನಾ ಕೂಡ ಈ ಪಾತ್ರ ನಾನು ಇದುವರೆಗೂ ಯಾವುದೇ ಸಿನಿಮಾದಲ್ಲಿ ನಿರ್ವಹಿಸದ ಪಾತ್ರ. ಇದು ಖಂಡಿತವಾಗಿಯೂ ನಿಮಗೆಲ್ಲಾ ಇಷ್ಟವಾಗುತ್ತೆ ಅಂತಾ ಹೇಳಿದ್ದಾರೆ.
 
ಇನ್ನು ಸಿನಿಮಾ ತಂಡದ ಮೂಲಗಳ ಪ್ರಕಾರ ಈಗಾಗಲೇ ಸಿನಿಮಾದಲ್ಲಿ ಪಾತ್ರಕ್ಕಾಗಿ ಸಂಜನಾ ವಾರ್ಡ್ ರೋಬ್ ನಲ್ಲಿ ರಾಶಿ ರಾಶಿ ಸಾರಿಗಳು, ಆಭರಣಗಳು ರಾಶಿ ಬಿದ್ದಿವೆಯಂತೆ. ಇದನ್ನೆಲ್ಲಾ ನೋಡುತ್ತಿದ್ರೆ ಸಿನಿಮಾದಲ್ಲಿ ಸಂಜನಾ ತುಂಬಾನೇ ಗ್ರ್ಯಾಂಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸೂಚನೆ ಸಿಗುತ್ತಿದೆ. ಇದಕ್ಕೆಲ್ಲಾ ಸರಿಯಾದ ಉತ್ತರ ಸಿಗಬೇಕಾದ್ರೆ ಸಿನಿಮಾ ರಿಲೀಸ್ ಆಗೋವರೆಗೂ ಕಾಯಲೇ ಬೇಕು.

Share this Story:

Follow Webdunia kannada