ಸ್ಯಾಂಡಲ್​ವುಡ್​ ಖ್ಯಾತ ನಿರ್ದೇಶಕ ಎಂ.ಎಸ್​.ರಾಜಶೇಖರ್​ ಇನ್ನಿಲ್ಲ

Webdunia
ಮಂಗಳವಾರ, 30 ಅಕ್ಟೋಬರ್ 2018 (07:06 IST)
ಬೆಂಗಳೂರು : ಸ್ಯಾಂಡಲ್​ವುಡ್​ ಖ್ಯಾತ ನಿರ್ದೇಶಕ ಎಂ.ಎಸ್​.ರಾಜಶೇಖರ್​ ಅವರು ಸೋಮವಾರ ಬೆಂಗಳೂರಿನ  ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


ಇವರಿಗೆ 75 ವರ್ಷ ವಯಸ್ಸಾಗಿದ್ದು, ಹಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರು ದಿನಗಳಿಂದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.


1985ರಲ್ಲಿ ರಾಜ್ ಕುಮಾರ್ ಅಭಿನಯದ ಧ್ರುವತಾರೆ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಅವರು ನಂತರ ರಥಸಪ್ತಮಿ, ನಂಜುಂಡಿ ಕಲ್ಯಾಣ, ಹೃದಯ ಹಾಡಿತು ಹೀಗೆ ಸುಮಾರು 35ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದರು.


ರವಿಚಂದ್ರನ್ ನಟನೆಯ ರವಿಶಾಸ್ತ್ರಿ ಸಿನಿಮಾ ಇವರು ನಿರ್ದೇಶಿಸಿದ ಕೊನೆಯ ಸಿನಿಮಾವಾಗಿದೆ.ಇವರು ಪತ್ನಿ ರಾಣಿ, ಮಗಳು ಶಾರದಾ, ಮಗ ರಘು ಅವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ಮಂಗಳವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ದಿಲೀಪ್ ಪರ ತೀರ್ಪು ಹೊರಬೀಳುತ್ತಿದ್ದ ಹಾಗೇ ವಾವ್ಹ್‌ ಜಸ್ಟ್‌ ವಾವ್ಹ್‌ ಎಂದ ಗಾಯಕಿ

ನಿಮ್ಮೊಂದಿಗಿನ ಸಂತೋಷದ ನೆನಪುಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ: ಹೇಮಾ ಮಾಲಿನ ಭಾವುಕ ಫೋಸ್ಟ್

ಆಕೆ ಹೇಳಿಕೆ ಬಳಿಕ ನನ್ನ ವಿರುದ್ಧ ಸಂಜು, ದಿಲೀಪ್‌ಗೂ ಮಂಜುಗೂ ಏನ್ ಸಂಬಂಧ ಗೊತ್ತಾ

ಬಹುಭಾಷಾ ನಟಿ ಕಿಡ್ನ್ಯಾಪ್, ಲೈಂಗಿಕ ಕಿರುಕುಳ ಕೇಸ್: ನಟ ದಿಲೀಪ್ ಕೇಸ್ ನಿಂದ ಖುಲಾಸೆ

ಮುಂದಿನ ಸುದ್ದಿ
Show comments