Webdunia - Bharat's app for daily news and videos

Install App

50 ವರ್ಷ ಹಿರಿಯವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಸಂಚಾರಿ ವಿಜಯ್

Webdunia
ಶುಕ್ರವಾರ, 5 ಫೆಬ್ರವರಿ 2016 (13:34 IST)
ಒಗ್ಗರಣೆ ಸಿನಿಮಾದಲ್ಲಿ ಹೇರ್ ಡ್ರೆಸ್ಸಿಂಗ್ ಮಾಡೋ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದ ಸಂಚಾರಿ ವಿಜಯ್ ಆ ಬಳಿಕ ಅಭಿನಯಿಸಿದ ಸಿನಿಮಾ ನಾನು ಅವನಲ್ಲ ಅವಳು. ಸಿನಿಮಾದಲ್ಲಿನ ವಿಜಯ್ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ದೊರಕಿತು.ಆ ಬಳಿಕ ವಿಜಯ್ ಅವರಿಗೆ ಇದೇ ರೀತಿಯ ಅನೇಕ ಪಾತ್ರಗಳು ಅರಸಿಕೊಂಡು ಬಂದವಂತೆ.ಆದ್ರೆ ವಿಜಯ್ ಒಪ್ಪಿಕೊಳ್ಳಲಿಲ್ಲ. ಇದೀಗ ವಿಜಯ್ ಹೊಸ ಗೆಟಪ್ ನಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಹತ್ಯಾರ ಅನ್ನೋ ಸಿನಮಾದಲ್ಲಿ ಸಂಚಾರಿ ವಿಜಯ್ ಅವರು ಅಭಿನಯಿಸುತ್ತಿದ್ದು, ಸಿನಿಮಾದಲ್ಲಿ ವಿಜಯ್ 45 ರಿಂದ 50 ವರ್ಷ ವಯಸ್ಸಿನ ವ್ಯಕ್ತಿ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಈಗಾಗಲೇ ಅದಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ.ಈ ರೀತಿಯ ಪಾತ್ರವನ್ನು ನಿರ್ವಹಿಸುತ್ತಿರೋದು ವಿಜಯ್ ಇದೇ ಮೊದಲ ಬಾರಿಯಂತೆ. ಅವರ ವೃತ್ತಿ ಜೀವನದಲ್ಲಿ ಈ ರೀತಿಯ ಪಾತ್ರವನ್ನು ಒಮ್ಮೆಯೂ ನಿರ್ವಹಿಸಿಲ್ಲವಂತೆ.
 
ಇನ್ನು ಹತ್ಯಾರ ಸಿನಿಮಾ ತುಂಬಾ ಒಳ್ಳೆ ಕಥೆಯಿರುವ ಸಿನಿಮಾವಂತೆ.ಸಿನಿಮಾದ ತಂತ್ರಜ್ಞರ ತಂಡ ತುಂಬಾನೇ ಚೆನ್ನಾಗಿದೆ ಅಂತಾ ವಿಜಯ್ ಹೇಳಿದ್ದಾರೆ.ಸತ್ಯ ಭಾರದ್ವಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.ಸಿನಿಮಾದಲ್ಲಿ ಅನಂತ್ ನಾಗ್ ಹಾಗೂ ಸುಹಾಸಿನಿ ಅವರು ಕೂಡ ಅಭಿನಯಿಸುತ್ತಾರೆ ಅಂತಾ ಹೇಳಲಾಗ್ತಿದೆಯಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments