Select Your Language

Notifications

webdunia
webdunia
webdunia
webdunia

ಛೇ ..! ಇಷ್ಟೊಂದು ಹೊಲಸಾಯಿತೆ ಕನ್ನಡ ಚಿತ್ರರಂಗ ?

ಛೇ ..! ಇಷ್ಟೊಂದು ಹೊಲಸಾಯಿತೆ ಕನ್ನಡ ಚಿತ್ರರಂಗ ?
ಚೆನ್ನೈ , ಶನಿವಾರ, 30 ಆಗಸ್ಟ್ 2014 (17:02 IST)
-ಅರುಣಕುಮಾರ ಧುತ್ತರಗಿ 
 
ಛಿ ನಾಚಿಗೇಡು ಸಂಗತಿ. ಸಿನೆಮಾದಲ್ಲಿ ಇಷ್ಟೊಂದು ಅಶ್ಲೀಲ ಘಟನೆಗಳು ನಡೆಯುತ್ತವೆಯೇ ? ನಾನಂತು ಭಾವಿಸಿರಲಿಲ್ಲ. ಆದರೆ ಖಾಸಗಿ ಮಾಧ್ಯಮವೊಂದರಲ್ಲಿ ಹರಿದಾಡಿದ ಸಾಂಡಲ್‌ವುಡ್‌ನ ಅಶ್ಲೀಲ ದೃಶ್ಯಗಳು ನಿಜಕ್ಕು ಹೇಸಿಗೆಯ ಸಂಗತಿ. ಇಷ್ಟೊಂದು ಕೆಟ್ಟು ಹೋಗಿದೆಯಾ ನಮ್ಮ ಸಿನೆಮಾ ರಂಗ. ಓದೊದೆಲ್ಲಾ ಕಾಶಿಖಂಡ, ತಿನ್ನೊದೆಲ್ಲ ಮಶಿಖಂಡ ಎನ್ನುವಹಾಗೆ ಆಗಿದೆ. ನಮ್ಮ ನಿರ್ದೇಶಕರು ಸಿನೆಮಾ ಮಾತ್ರ ಒಳ್ಳೆಯ ರೀತಿ ತೆಗೆಯುತ್ತಾರೆ, ಆದರೆ ತಾವು ಮಾತ್ರ ಅಶ್ಲೀಲವಾಗಿರುತ್ತಾರೆ ಎಂದರೆ ಇದು ನಾಗರೀಕ ಸಮಾಜ ತಲೆ ತಗ್ಗಿಸುವ ಸಂಗತಿ. 
 
ಪುಟ್ಟಣ ಕಣಗಾಲ್‌‌ರಂತಹ ಒಳ್ಳೆಯ  ನಿರ್ದೇಶಕರನ್ನು ಕಂಡ ನಾಡಿದು. ಅವರು ಮಾಡಿದ ಸಿನೆಮಾಗಳೆಲ್ಲವು ಸೂಪರ್‌ಹಿಟ್‌. ಮತ್ತು ಅವರ ಮೇಲೆ ಯಾವುದೇ ಕಪ್ಪು ಚುಕ್ಕೆಗಳು ಕೂಡ ಇಲ್ಲ. ಆ ಕಾಲದ ಸಿನಮಾಗಳೆಲ್ಲವು ಸಮಾಜಕ್ಕೆ ಸಂದೇಶ ಸಾರುವ ಸಿನಮಾಗಳು. ಆದರೆ, ಇತ್ತೀಚಿನ ಸಿನೆಮಾಗಳು ಡಬಲ್‌ಮಿನಿಂಗ್‌ ಮತ್ತು ಅಶ್ಲೀಲ ಸಿನೆಮಾಗಳಾಗಿರುತ್ತಿವೆ. ಇದಕ್ಕೆ ಕಾರಣ ನಮ್ಮ ನಿರ್ದೇಶಕರ ಮನಸ್ಸುಗಳೆ ಅಶ್ಲೀಲವಾಗಿರುವಾಗ ಸಿನೆಮಾಗಳು ಆದರು ಹೇಗೆ ಒಳ್ಳೆಯದಾಗಿರುತ್ತವೆ ಹೇಳಿ. 
 
ಓಂ ಪ್ರಕಾಶರಾವ್‌ ತುಂಬಾ ಒಳ್ಳೆಯ ನಿರ್ದೇಶಕ, ಒಳ್ಳೊಳ್ಳೆ ಸಿನೆಮಾಗಳನ್ನು ನಿರ್ದೇಶಿಸಿದವರು. ಆದರೆ, ಮಾಧ್ಯಮಗಳಲ್ಲಿ ತೋರಿಸಿದ ಹಾಗೆ, ಯುವತಿಯ ಪಕ್ಕಕ್ಕೆ ಕುಳಿತು ಅವಳ ಭುಜಗಳನ್ನು ಕಾಮುಕ ರೀತಿಯಲ್ಲಿ ಹಿಡಿದುರುವುದ ನೋಡಿದರೆ. ನಿಜಕ್ಕು ಎಂತಹ ಅಸಯ್ಯ ಮತ್ತು ಹೇಸಿಗೆ ಎನಿಸುತ್ತದೆ. 
ಇವರಿಗೆನು ಹೆಂಡತಿಯರಿಲ್ಲವೆ. ನಮ್ಮ ಕನ್ನಡದ ಹುಡುಗಿಯರೇ ಬೇಕೆ? 
 
ಮಾಧ್ಯಮಗಳಲ್ಲಿ ಆ ನೊಂದ ಯುವತಿಯರ ಕಣ್ಣಿರು, ಅವರ ವೇದನೆ, ಅವರ ರೋಧನ ಕನ್ನಡ ಪರ ಸಂಘಟನೆಗಳಿಗೆ ಕೇಳಿಸುತ್ತಿಲ್ಲವೆ. ಸದಾ ಕನ್ನಡ, ಕನ್ನಡದ ಹೆಣ್ಣು ಮಕ್ಕಳ ರಕ್ಷಣೆಗಾಗಿ ಹೋರಾಡುತ್ತೇವೆ ಎಂದು ಹೇಳುವ ಈ ಕನ್ನಡ ಪರ ಸಂಘಟನೆಗಳು ಕಣ್ಣು ಮುಚ್ಚಿ ಕುಳಿತದ್ದೇಕೆ ಎಂಬ ಪ್ರಶ್ನೆ, ಹಲವಾರು ಅನುಮಾನಗಳಿಗೆ ಕಾರಣವಾಗುತ್ತವೆ. 
 
ನಮ್ಮ ಕನ್ನಡದ ಯುವತಿಯರು ಸುಂದರಿಯರು, ಜಾಣೆಯರು, ಉತ್ತಮ ನಟನಾ ಪ್ರತಿಭೆ ಹೊಂದಿದವರು. ಆದರೆ, ಇವರು ಪ್ರಾಮಣಿಕರಾಗಿದ್ದಕ್ಕೆ ಮತ್ತು ಮಂಚಕ್ಕೆ ಹೋಗಲು ಸಿದ್ದರಿರದ ಕಾರಣ ಇವರು ಬೆಳಕಿಗೆ ಬರುತ್ತಿಲ್ಲ. ಸಿನೆಮಾ ರಂಗದಲ್ಲಿ ಪ್ರತಿಭೆಗಳಿಗೆ ಅವಕಾಶವೇ ಇಲ್ಲ. ಇಲ್ಲಿ ಏನಿದ್ದರು ಮಂಚದ ಮೇಲೆ ಮಲಗಿದವರಿಗೆ ಮಾತ್ರ ಬೇಡಿಕೆನಾ ? 
 
ಇನ್ನು ಮುಂದಾದರು ಕನ್ನಡ ಚಿತ್ರರಂಗ ಎಚ್ಚೇತ್ತುಕೊಳ್ಳಲಿ. ಒಳ್ಳೆಯ ಪ್ರತಿಭೆಗಳಿಗೆ ಅವಕಾಶ ನೀಡಲಿ. ಸುಸಂಕೃತ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವುದು ನಿಲ್ಲಲ್ಲಿ. ಇದಕ್ಕಾಗಿ ಕನ್ನಡದ ಜನತೆ ಎಚ್ಚೆತ್ತು ಕೊಳ್ಳಬೇಕು. ಕನ್ನಡ ಪರ ಸಂಘಟನೆಗಳು ಕೂಡ ಎಚ್ಚೆತ್ತುಕೊಂಡು ಇಂತಹ ಹೇಯ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂಬುದೇ ನನ್ನ ಆಶಯ. ಕನ್ನಡಕ್ಕೆ ಜಯವಾಗಲಿ. 

Share this Story:

Follow Webdunia kannada