Select Your Language

Notifications

webdunia
webdunia
webdunia
webdunia

ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಮ್ಮತಿ ಸೂಚಿಸಿದ ಸೆಕ್ಸಿ ಸಮಂತಾ

ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಮ್ಮತಿ ಸೂಚಿಸಿದ ಸೆಕ್ಸಿ ಸಮಂತಾ
, ಶುಕ್ರವಾರ, 30 ಜನವರಿ 2015 (10:04 IST)
ದಕ್ಷಿಣ ಭಾರತದಲ್ಲಿ ಅದರಲ್ಲೂ ತೆಲುಗು ಮತ್ತು ತಮಿಳು ಚಿತ್ರರಂಗದ ನಂಬರ್ ಒನ್ ಸ್ಥಾನದಲ್ಲಿ ಸಮಂತ ಇದ್ದಾಳೆ ಎಂದರೆ ಅದು ಸರಿ ಎಂದೇ ಹೇಳ ಬಹುದಾಗಿದೆ. ಏಕೆಂದರೆ, ಆಕೆಯ ಅಭಿನಯದ ಚಿತ್ರಗಳು ಬಾಕ್ಸಾಫೀಸಲ್ಲಿ ಗದ್ದಲ ಮಾಡಿದೆ. ಆಕೆ ವಿಜಯ್ ಜೊತೆ ಅಭಿನಯಿಸಿದ ಇತ್ತೀಚಿಗೆ ಬಿಡುಗಡೆಯಾದ ಕತ್ತಿ ಚಿತ್ರ  ನೂರು ಕೋಟಿ ರೂಪಾಯಿಗಳು ಗಳಿಕೆ ಮಾಡಿದೆ. 
ಈಗ ಈ ಹೀರೋಯಿನ್ ಇಬ್ಬರು ಕಾಲಿವುಡ್ ಸ್ಟಾರ್ ನಟರ ಜೊತೆ ಅಭಿನಯಿಸುತ್ತಿದ್ದಾಳೆ. ವಿಕ್ರಮ್ ಮತ್ತು ಧನುಷ್ ಆ ಇಬ್ಬರು ನಟರು. ಒಂದು ಚಿತ್ರದ ಚಿತ್ರೀಕರಣ ಆರಂಭವಾಗಿದ್ದರೆ, ಮತ್ತೊಂದು ಚಿತ್ರದ ಚಿತ್ರೀಕರಣದ ಕೆಲಸಗಳು ಸಿದ್ಧತೆಯಲ್ಲಿದೆ. ಕಾಲಿವುಡ್ ನಲ್ಲಿ  ಸಮಂತ ಸ್ಟಾರ್ ಡಂ ಕ್ರಿಯೇಟ್ ಆಗಿದೆ. ಆದರೆ ಈಗ ಬಂದಿರುವ ಸುದ್ದಿ ಏನೆಂದರೆ ಏಕೆ ತಮಿಳು ಚಿತ್ರ ಒಂದರಲ್ಲಿ ಖಳನಾಯಕಿಯಾಗಿ ಅಭಿನಯಿಸುತ್ತಿದ್ದಾಳೆ. ಅಂದ್ರೆ   ತಮಿಳು ಚಿತ್ರದ ನಿರ್ದೇಶಕರೊಬ್ಬರು ಆಕೆಗೆ ಖಳನಾಯಕಿಯಾಗಲು ಅವಕಾಶ ನೀಡಿದ್ದಾರೆ, ಅದಕ್ಕೆ ಆಕೆಯಿಂದ ಸಮ್ಮತಿ ದೊರೆತಿದೆ. ಈಗ ಸಮ್ಮತಿಸಿರುವ ಚಿತ್ರಗಳ ಶೂಟಿಂಗ್  ನಂತರ ಖಳ ನಟಿಯಾಗುತ್ತಾಳಂತೆ ಹಾಗಂತ ಸುದ್ದಿ  ಹರಡಿದೆ. 
 

Share this Story:

Follow Webdunia kannada