Select Your Language

Notifications

webdunia
webdunia
webdunia
webdunia

ಬಾಲಿವುಡ್ ಚಿತ್ರದಲ್ಲಿ ನಟಿಸುವ ಚಾನ್ಸ್ ಪಡೆದ ಸಮಂತ

ಬಾಲಿವುಡ್ ಚಿತ್ರದಲ್ಲಿ ನಟಿಸುವ ಚಾನ್ಸ್ ಪಡೆದ ಸಮಂತ
, ಸೋಮವಾರ, 27 ಜುಲೈ 2015 (10:37 IST)
ನಾಗಚೈತನ್ಯ ಅವರ ಜೊತೆ ಟಾಲಿವುಡ್  ಚಿತ್ರದಲ್ಲಿ ನಟಿಸಿದ ಬಳಿಕ ನಟಿ ಸಮಂತ ಅವರಿಗೆ ಅಪಾರವಾದ ಅವಕಾಶಗಳು ಹುಡುಕಿಕೊಂಡು ಬಂದವು. ಅವರು ಅಲ್ಲಿ ಗೆದ್ದು ಆ ಬಳಿಕ ಕಾಲಿವುಡ್ ಕಡೆಗೆ ಹೋದರು. ಅಲ್ಲಿ ಸಹಿತ ಅವರನ್ನು ಜನರು ಪ್ರೀತಿಯಿಂದ ಸ್ವೀಕರಿಸಿದರು. ಈಗ ಅವರು ತಮಿಳು ಮತ್ತು ತೆಲುಗು ಭಾಷೆಗಳ ಯಶಸ್ವಿ ತಾರೆ.
ಆರಂಭಿಕ ಹಂತದಲ್ಲಿ ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಆದ ಸಮ್ಮು ಆ ಬಳಿಕ 2007 ರಲ್ಲಿ ರವಿ ವರ್ಮನ್ ಚಿತ್ರ ಮಾಸ್ಕೊವಿನ್ ಕೊವರಿ ಸಿನಿಮಾದಲ್ಲಿ ನಟಿಸಿದರು. ಇದು ಆಕೆಯ ಮೊಟ್ಟಮೊದಲ ಅಭಿನಯದ ಚಿತ್ರ. ಅದಾದ ಬಳಿಕ ತೆಲುಗು ಚಿತ್ರರಂಗಕ್ಕೆ ಬಂದಾಕೆ ಅಲ್ಲಿ ಗೆಲುವಿನ ಪತಾಕೆ ಹಾರಿಸಿದರು. 2013  ರೇವತಿ ನಂತರ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಫಿಲಿಂಫೇರ್ ಪ್ರಶಸ್ತಿ ಪಡೆದ ನಟಿ ಎನ್ನುವ ಅಗ್ಗಳಿಕೆ ಪಡೆದಿದ್ದಾರೆ.  
 
ದಕ್ಷಿಣ ಭಾರತದಲ್ಲಿ ಗೆದ್ದಿರುವ ಈ ನಟಿಗೆ ಈಗ ಬಾಲಿವುಡ್ ನಲ್ಲಿ ಸಹಿತ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ ಎನ್ನುವ ಸುದ್ದಿ ಬಂದಿದೆ. ಯಾವುದೇ ಕಷ್ಟ ಇಲ್ಲದೆ ಈಗ ಆಕೆ ಬಾಲಿವುಡ್ ಗೂ ಸಹಿತ ಎಂಟ್ರಿ ಆಗುತ್ತಿದ್ದಾರೆ. ಧನುಷ್ ಅವರ ಜೊತೆ ವಿಐಪಿ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರವನ್ನು ರೀಮೇಕ್ ಮಾಡುವ ಉದ್ದೇಶವನ್ನು ಆನಂದ್ ಎಲ್ ರಾಯ್ ಅವರು ಹೊಂದಿದ್ದಾರೆ. ಧನುಶ್ ಹೀರೋ ಆಗಿರುವ ಈ ಚಿತ್ರದಲ್ಲಿ ಸಮಂತ ಹೀರೋಯಿನ್ ಆಗಿದ್ದಾರೆ ಈ ಮೂಲಕ ಆಕೆ ಬಾಲಿವುಡ್ ಕಡೆಗೂ ತಮ್ಮ ಪಯಣ ಬೆಳೆಸಿದ್ದಾರೆ.  

Share this Story:

Follow Webdunia kannada