Select Your Language

Notifications

webdunia
webdunia
webdunia
webdunia

ಸುಲ್ತಾನ್ ಸಿನಿಮಾದ ಫೋಟೋವೊಂದನ್ನು ಶೇರ್ ಮಾಡಿದ ಸಲ್ಮಾನ್ ಖಾನ್

ಸುಲ್ತಾನ್ ಸಿನಿಮಾದ ಫೋಟೋವೊಂದನ್ನು ಶೇರ್ ಮಾಡಿದ ಸಲ್ಮಾನ್ ಖಾನ್
, ಶನಿವಾರ, 10 ಅಕ್ಟೋಬರ್ 2015 (11:52 IST)
ಭಜರಂಗಿ ಭಾಯಿಜಾನ್ ಸಿನಿಮಾ ಬಳಿಕ ಸಲ್ಲು ಅಭಿನಯಿಸುತ್ತಿರುವ ಸಿನಿಮಾ ಸುಲ್ತಾನ್. ಸುಲ್ತಾನ್ ಸಿನಿಮಾ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸಲ್ಮಾನ್ ಖಾನ್ ಸಿನಿಮಾಕ್ಕಾಗಿ ತರಬೇತಿ ಪಡೆಯುತ್ತಿರುವ ಫೋಟೋ ಒಂದನ್ನು ಟ್ವಿಟ್ಟರ್ ಶೇರ್ ಮಾಡಿದ್ದಾರೆ.
ಇನ್ನು ತಾವು ಶೇರ್ ಮಾಡಿರುವ ಫೋಟೋದ ಕೆಳಗೆ ಸಲ್ಲು ಇದು ಸುಲ್ತಾನ್ ಸಿನಿಮಾಕ್ಕಾಗಿ ತರಬೇತಿ ಪಡೆಯುತ್ತಿದ್ದಾಗ ತೆಗೆದ ಫೋಟೋ ಅಂತಾ ಬರೆದಿದ್ದಾರೆ. ಸಿನಿಮಾಗಾಗಿ ಸಲ್ಲುಗೆ ಲಾರ್ನೆಲ್ ಸ್ಟೋವಲ್ ತರಬೇತಿ ನೀಡುತ್ತಿದ್ದಾರೆ. ಆದಿತ್ಯಾ ಛೋಫ್ರಾ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಅಲಿ ಅಬ್ಬಾಸ್ ಝಾಫರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 
 
ಖ್ಯಾತ ಕುಸ್ತಿ ಪಟು ಮಹಾವೀರ್ ಪೋಗತ್ ಜೀವನಾಧರಿತ ಚಿತ್ರ ಇದಾಗಿದ್ದು, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲೂ ಜೊತೆಗೆ ಬಾಲಿವುಡ್ ಅಂಗಳದಲ್ಲೂ ಸಾಕಷ್ಟು ಕುತೂಹಲಗಳಿವೆ. ಈಗಾಗಲೇ ಫಸ್ಟ್ ಲುಕ್ ಮೂಲಕವೇ ಸಂಪ್ರೈಸ್ ನೀಡಿರುವ ಈ ಸಿನಿಮಾ ಮುಂದಿನ ವರ್ಷ ಈದ್ ಹಬ್ಬಕ್ಕೆ ಪ್ರೇಕ್ಷಕರೆದುರಿಗೆ ಬರಲಿದೆ.

Share this Story:

Follow Webdunia kannada