Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣ: ಇಂದು ಅಂತಿಮ ತೀರ್ಪು

ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣ:  ಇಂದು ಅಂತಿಮ ತೀರ್ಪು
ಮುಂಬೈ , ಬುಧವಾರ, 6 ಮೇ 2015 (10:01 IST)
2002ರಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೆಷನ್ಸ್ ಕೋರ್ಟ್ ಬುಧವಾರ  ಅಂತಿಮ ತೀರ್ಪು ನೀಡಲಿದೆ.
 
2002ರ ಸೆಪ್ಟೆಂಬರ್ 28ರಂದು ಸಲ್ಮಾನ್ ಖಾನ್ ಅವರಿದ್ದ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರು ವಾಣಿಜ್ಯ ನಗರಿ ಮುಂಬೈನ ಬಾಂದ್ರಾ ಬಳಿ ಫುಟ್‌ಪಾತ್ ಮೇಲೆ ಚಲಿಸಿದ ಪರಿಣಾಮ, ಒಬ್ಬ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಮೇ 6ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. 
 
ಕಳೆದ ಮಾರ್ಚ್ 30ರಂದು ಮೊದಲ ಬಾರಿಗೆ ಮುಂಬೈ ಕೋರ್ಟ್‍ಗೆ ಸಲ್ಮಾನ್ ಖಾನ್ ಡ್ರೈವರ್ ಅಶೋಕ್ ಹಾಜರಾಗಿ, ಘಟನೆ ವೇಳೆ ನಾನೇ ಡ್ರೈವ್ ಮಾಡ್ತಿದ್ದೆ ಎಂದು ಸಾಕ್ಷಿ ಹೇಳಿದ್ದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.
 
ಇಲ್ಲಿಯವರೆಗೆ ನ್ಯಾಯಾಲಯ 27 ಸಾಕ್ಷಿಗಳ ವಿಚಾರಣೆ ನಡೆಸಿದ್ದು ಇಂದು 11.30ಕ್ಕೆ ಅಂತಿಮ ತೀರ್ಪು ಹೊರಬೀಳಲಿದೆ.
 
ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾದರೆ ಕನಿಷ್ಠ 10 ವರ್ಷ ಸೆರೆವಾಸ ಅನುಭವಿಸಬೇಕಾಗುತ್ತದೆ.  ಸಲ್ಮಾನ್ ಖಾನ್ ನಟನೆಯ ಚಿತ್ರಗಳ ಮೇಲೆ ಪ್ರಸ್ತುತ 200 ಕೋಟಿ ರೂ. ಹಣ ತೊಡಗಿಸಲಾಗಿದೆ. ಇದರಿಂದ ಸಹಜವಾಗಿಯೇ ಬಾಲಿವುಡ್ ನಿರ್ಮಾಪಕರಲ್ಲಿ ಆತಂಕ ಸೃಷ್ಟಿಯಾಗಿದೆ.

Share this Story:

Follow Webdunia kannada