Select Your Language

Notifications

webdunia
webdunia
webdunia
webdunia

ತಮ್ಮ ಬಾಡಿ ಗಾರ್ಡ್ ಮೇಲೆ ಕೈ ಎತ್ತಿದ್ರಾ ಸಲ್ಲು ಭಾಯಿ

ತಮ್ಮ ಬಾಡಿ ಗಾರ್ಡ್ ಮೇಲೆ ಕೈ ಎತ್ತಿದ್ರಾ ಸಲ್ಲು ಭಾಯಿ
, ಶನಿವಾರ, 6 ಫೆಬ್ರವರಿ 2016 (10:43 IST)
ನಟ ತೆರೆ ಮೇಲೆ ಹೇಗೆ ಎಲ್ಲರನ್ನು ರಂಜಿಸುತ್ತಾರೋ ಹಾಗೇ ನಿಜ ಜೀವನದಲ್ಲೂ ಅವರು ವ್ಯಕ್ತಿಗಳಿಗೆ ತಮ್ಮ ಜೊತೆ ಕೆಲಸ ಮಾಡುವವರಿಗೆ ಗೌರವ ಕೊಡ್ತಾರೆ. ಹಾಗೇ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅನ್ನೋದು ಹೆಚ್ಚಿನವರಿಗೆ ಗೊತ್ತಿರೋ ವಿಚಾರ.ಆದ್ರೆ ಇದೀಗ ಸಲ್ಲು ತಮ್ಮ ಬಾಡಿ ಗಾರ್ಡ್ ಮೇಲೆ ಕೈ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಹೌದು...ಅದ್ಯಾಕೋ ಗೊತ್ತಿಲ್ಲ ಸಲ್ಮಾನ್ ಆಗಾಗ್ಗೆ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತಾರೆ. ಇದೀಗ ತಮ್ಮ ಬಾಡಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನೋ ಆರೋಪ ಸಲ್ಲು ವಿರುದ್ಧ ಕೇಳಿ ಬಂದಿದೆ. ಮೊನ್ನೆ ಮಾಧ್ಯಮವರು ಸಲ್ಲು ಅವರ ಜೊತೆ ಮಾತನಾಡಲು ಅವರ ಬಳಿ ಬಂದಿದ್ರಂತೆ. ಈ ವೇಳೆ ಸಲ್ಲು ಬಾಡಿ ಗಾರ್ಡ್ ಮಾಧ್ಯಮದವರನ್ನು ತಳ್ಳಿದ್ದಾರೆ ಇದರಿಂದ ಕೆರಳಿದ ಸಲ್ಲು ಬಾಡಿ ಗಾರ್ಡ್ ಮೇಲೆ ಕೈ ಮಾಡಿದ್ದಾರೆ ಅಂತಾ ಹೇಳಲಾಗ್ತಿದೆ.
 
ಇನ್ನು ಸಲ್ಮಾನ್ ಖಾನ್ ಅವರು ಬಾಡಿ ಗಾರ್ಡ್ ಮೇಲೆ ಹಲ್ಲೆ ನಡೆಸುವಾಗ ಪ್ರೀತಿ ಝಿಂಟಾ ಹಾಗೂ ಸುಸೈನ್ ಕೂಡ ಸ್ಥಳದಲ್ಲಿದ್ದರು ಅಂತಾ ಹೇಳಲಾಗ್ತಿದೆ.ಆದ್ರೆ ಇದು ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದು ಗೊತ್ತಿಲ್ಲ. ಈ ಬಗ್ಗೆ ಸಲ್ಮಾನ್ ಖಾನ್ ಅವರೇ ಪ್ರತಿಕ್ರಿಯೆ ನೀಡಬೇಕಷ್ಟೇ.

Share this Story:

Follow Webdunia kannada