Webdunia - Bharat's app for daily news and videos

Install App

ಸುಲ್ತಾನ್ ಸಿನಿಮಾ ಸಲ್ಮಾನ್ ಖಾನ್ ಅವರ ಅತೀ ಉದ್ದದ ಚಿತ್ರ

Webdunia
ಗುರುವಾರ, 30 ಜೂನ್ 2016 (09:01 IST)
ಸುಲ್ತಾನ್ ಸಿನಿಮಾ ರಿಲೀಸ್ ಆಗೋದಕ್ಕ ಇನ್ನೇನು ಕೆಲವೇ ದಿನಗಳು ಬಾಕಿ ಇವೆ ಅನ್ನೋವಾಗ ಸಿನಿಮಾದ ಕುರಿತಾದ ಕೆಲವು ಆಸಕ್ತಿಕರ ವಿಚಾರಗಳು ಒಂದೊಂದಾಗಿ ಬಹಿರಂಗವಾಗುತ್ತಲೇ ಇದೆ. ಸಲ್ಮಾನ್ ಖಾನ್ ಅವರು ಸಿನಿಮಾದಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿರೋದು ಒಂದು ಕಡೆಯಾದ್ರೆ ಈ ಸಿನಿಮಾ ಅವರ ವೃತ್ತಿ ಬದುಕಿನಲ್ಲಿ ನೆನಪಿನಲ್ಲಿ ಉಳಿಯುವಂತಹ ಸಿನಿಮಾ.

ಸಲ್ಮಾನ್ ಖಾನ್ ಅವರ ಸುಸ್ತಾಲ್ ಸಿನಿಮಾ ಸಲ್ಲು ಪಾಲಿಗೆ ಅತ್ಯಂತ ವಿಶೇಷವಾದ ಸಿನಿಮಾ, ಯಾಕಪ್ಪಾ ಅಂದ್ರೆ ಇದುವರೆಗೂ ಸಲ್ಮಾನ್ ಖಾನ್ ಅವರು ಅಭಿನಯಿಸಿರುವಂತಹ ಸಿನಿಮಾಗಳಲ್ಲಿ ಅತೀ ಉದ್ದದ ಸಿನಿಮಾ ಅಂದ್ರೆ ಅದು ಸುಲ್ತಾನ್ ಸಿನಿಮಾವಂತೆ. ಈ ಸಿನಿಮಾ ಬರೋಬ್ಬರಿ 2 ಗಂಟೆ  50 ನಿಮಿಷವಿದೆ. ಸಲ್ಮಾನ್ ಖಾನ್ ಅವರು ಇದುವೆರಗೂ ಇಷ್ಟು ಉದ್ದದ ಸಿನಿಮಾದಲ್ಲಿ ಅಭಿನಯಿಸಿಲ್ಲವಂತೆ.
 
ಅದಲ್ಲದೇ ಸೆನ್ಸಾರ್ ಬೋರ್ಡ್ ಮೊನ್ನೆ ತಾನೇ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ನೀಡಿದೆ.ಅಲ್ಲದೇ ಸಿನಿಮಾದ ಯಾವುದೇ ಸನ್ನಿವೇಶಕ್ಕೂ ಕತ್ತರಿ ಹಾಕದೇ ಇರೋದರಿಂದ ಸಿನಿಮಾ ಧೀರ್ಘವಾಗಿಯೇ ಉಳಿದಿದೆ.ಇನ್ನು ಈ ಸಿನಿಮಾ ಸಲ್ಮಾನ್ ಖಾನ್ ಅವರಿಗೆ ಸ್ಪೆಷಲ್ ಇಮೇಜ್ ಒಂದನ್ನು ತಂದುಕೊಡುತ್ತೆ ಅಂತಾ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಹೇಳಿದ್ದಾರೆ.
 
ಸುಲ್ತಾನ್ ಸಿನಿಮಾವನ್ನು ಅಲಿ ಅಬ್ಬಾಸ್ ಜಾಫರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಅವರು ಸಲ್ಮಾನ್ ಖಾನ್ ಅವರಿಗೆ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಆದಿತ್ಯಾ ಛೋಪ್ರಾ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಜುಲೈ 6 ಅಂದ್ರೆ ಈದ್ ಹಬ್ಬಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
< > ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ< >

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments