Webdunia - Bharat's app for daily news and videos

Install App

ಸಲ್ಮಾನ್ ಖಾನ್ ಅತ್ಯಂತ ಉತ್ತಮ ವ್ಯಕ್ತಿ- ಕತ್ರೀನಾ ಕೈಫ್

Webdunia
ಗುರುವಾರ, 26 ನವೆಂಬರ್ 2015 (10:25 IST)
ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ನಡುವಿನ ಪ್ರೇಮ ಪುರಾಣ ಎಲ್ಲರಿಗೂ ಗೊತ್ತೇ ಇದೆ.ಇನ್ನೇನು ಸಲ್ಲು ಹಾಗೂ ಕತ್ರೀನಾ ಕೈಫ್ ಮದುವೆಯಾಗುತ್ತಾರೇ ಅನ್ನುವಷ್ಟರಲ್ಲಿ ಅವರಿಬ್ಬರು ಪರಸ್ಪರ ದೂರವಾಗಿದ್ದರು.ಆದ್ರೆ ಇಂದಿಗೂ ಅವರಿಬ್ಬರು ಪರಸ್ಪರ ಗೌರವಿಸುತ್ತಾರೆ ಅನ್ನೋದಕ್ಕೆ ಕತ್ರೀನಾ ನೀಡಿರುವ ಹೇಳಿಕೆಯೇ ಸಾಕ್ಷಿ.
  
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕತ್ರೀನಾ ಕೈಫ್ ಸಲ್ಮಾನ್ ಖಾನ್ ಒಬ್ಬ ಉತ್ತಮ  ವ್ಯಕ್ತಿ ಎಂದಿದ್ದಾರೆ.ಅಲ್ಲದೇ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾಗ ಅವರ ಕುಟುಂಬದವರನ್ನು ಅನೇಕ ಬಾರಿ ಭೇಟಿಯಾಗಿದ್ದೇನೆ. ಹೀಗೆ ಭೇಟಿಯಾದಾಗ ಅವರೆಲ್ಲಾ ನನ್ನನ್ನು ಮಗಳಂತೆ ನೋಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಕೂಡ ನನ್ನನ್ನು ತುಂಬಾನೇ ಗೌರವಿಸುತ್ತಿದ್ದರು ಅಂತಾ ಕ್ಯಾಟ್ ಹೇಳಿದ್ದಾರೆ.
 
ಸದ್ಯ ಕತ್ರೀನಾ ಕೈಫ್ ಹಾಗೂ ರಣ್ ಬೀರ್ ಪರಸ್ಪರ ಪ್ರೀತಿಸುತ್ತಿರೋದು ಗೊತ್ತೇ ಇದೆ. ಆದ್ರೆ ಇತ್ತೀಚಿನ ಬೆಳವಣಿಗೆ ನೋಡಿದ್ರೆ ರಣ್ ಬೀರ್ ಹಾಗೂ ಕ್ಯಾಟ್ ವಿವಾಹವಾಗುತ್ತಾರೋ ಅನ್ನೋ ಅನುಮಾನ ಮೂಡುತ್ತಿದೆ.ಯಾಕಂದ್ರೆ ರಣ್ ಬೀರ್ ಮೊನ್ನೆಯಷ್ಟೇ ನಾವಿಬ್ಬರು ಜೊತೆಯಾಗಿರುತ್ತೇವೆ. ವಿವಾಹವಾಗೋದಿಲ್ಲ ಅಂದಿದ್ದಾರೆ. ಇನ್ನೂ ಕತ್ರೀನಾ ಕೂಡ ನಾನು ಹಾಗೂ ರಣ್ ಬೀರ್ ಒಳ್ಳೆಯ ಗೆಳೆಯರು ಅಂದಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ರೆ ಮುಂದೇನಾಗುತ್ತೆ ಅನ್ನೋ ಅನುಮಾನ ಕಾಡುತ್ತಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments