Select Your Language

Notifications

webdunia
webdunia
webdunia
webdunia

ಸೈಫ್ ಮನಕ್ಕೆ ಹತ್ತಿರವಾಗಿರುವ ಗುಳಿಗಲ್ಲದ ಚೆಲುವೆ ಪ್ರೀತಿ ಜಿಂಟ..

ಸೈಫ್ ಮನಕ್ಕೆ ಹತ್ತಿರವಾಗಿರುವ ಗುಳಿಗಲ್ಲದ ಚೆಲುವೆ ಪ್ರೀತಿ ಜಿಂಟ..
, ಮಂಗಳವಾರ, 21 ಅಕ್ಟೋಬರ್ 2014 (13:12 IST)
ನವಾಬ್ ಸೈಫ್ ಅಲಿ ಖಾನ್  ಹಮ್ಷಕಲ್  ಚಿತ್ರ ಮಕಾಡೆ ಮಲಗಿದ ಬಳಿಕ ಇನ್ನು ಮಾಡ್ತಾ ಇದ್ದಾರೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದರೆ ಆ ಬಗ್ಗೆ ಚಿಂತೆ ಬೇಡ.. ಈಗ ನವಾಬ್ ತಮ್ಮ ಹೊಸ ಚಿತ್ರ ಹ್ಯಾಪಿ ಎಂಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ  ಗುಳಿಗಲ್ಲದ ಚೆಲುವೆ ಪ್ರೀತಿ ಜಿಂಟ ಸಹಿತ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಇತ್ತೀಚಿಗೆ ತಮ್ಮ ಭಾವನೆಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು ಸೈಫ್. ಅವರ ಮಾತಿನ ನಡುವೆ ಹೆಚ್ಚು  ಸಾಫ್ಟ್ ಕಾರ್ನರ್ ಹೊಂದಿದ್ದು ಪ್ರೀತಿ ಜಿಂಟಾ ಬಗ್ಗೆ. 
 
ಪ್ರೀತಿ ಸೈಫ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆಕೆಯು ಸೈಫ್ ಮಿಯ ಅವರ ಮಾಜಿ ಪ್ರೇಯಸಿಯ ಪಾತ್ರದಲ್ಲಿ  ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರೀತಿಯ ಪಾತ್ರ ಭಿನ್ನವಾಗಿದ್ದು, ಮನಸೆಳುವಂತೆ ವಿಶೇಷವಾಗಿದೆ ಎಂದು ಹೇಳಿದ್ದಾರೆ ಸೈಫ್ ಅಲಿ ಖಾನ್. 
 
ಕರೀನ ಜೊತೆ ಮದುವೆಯಾದ ಸಮಯದಲ್ಲಿ ಪ್ರೀತಿಯು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ನೆನಪಿಸಿ ಕೊಂಡರು ಈ ಸಂದರ್ಭದಲ್ಲಿ. ಈ ಚಿತ್ರದಲ್ಲಿ ಗೋವಾ ಸುಂದರಿ ಇಲಿಯಾನ  ಮುಖ್ಯ ಪಾತ್ರಧಾರಿಯಾಗಿದ್ದಾಳೆ.  
 

Share this Story:

Follow Webdunia kannada