Select Your Language

Notifications

webdunia
webdunia
webdunia
webdunia

ರನ್ ಆಂಟೋನಿ ಸಿನಿಮಾದ ಮುಹೂರ್ತದಲ್ಲಿ ತಾರಾ ಸಂಗಮ

ರನ್ ಆಂಟೋನಿ ಸಿನಿಮಾದ ಮುಹೂರ್ತದಲ್ಲಿ ತಾರಾ ಸಂಗಮ
, ಮಂಗಳವಾರ, 15 ಡಿಸೆಂಬರ್ 2015 (11:50 IST)
ರಾಜ್ ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಎರಡನೇ ಸಿನಿಮಾ ರನ್ ಆಂಟೋನಿ ಸಿನಿಮಾದ ಮುಹೂರ್ತ ನಿನ್ನೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಸಿನಿಮಾದ ಮುಹೂರ್ತ ಅನೇಕ ತಾರೆಯರ ಸಮಾಗಮಕ್ಕೆ ಸಾಕ್ಷಿಯಾಯ್ತು.ನಟ ಶಿವರಾಜ್ ಕುಮಾರ್ ದಂಪತಿ, ಪುನೀತ್ ರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್, ಪಾರ್ವತಮ್ಮ  ರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.


 ರನ್ ಆಂಟೋನಿ ಸಿನಿಮಾ ರೊಮ್ಯಾಂಟಿಕ್ ಕಥೆಯಾಧಾರಿತ ಸಿನಿಮಾವಾಗಿದ್ದು, ಸಿನಿಮಾದಲ್ಲಿ ವಿನಯ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನು ಸಿನಿಮಾಗೆ ನಾಯಕಿಯರಾಗಿ ರುಕ್ಸಾನಾ ಹಾಗೂ ಸುಷ್ಮಿತಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ವಿನಯ್ ಸಹೋದರ ಗುರುರಾಜ್ ಕುಮಾರ್ ನಿರ್ಮಾಪಕರಾಗಿದ್ದಾರೆ. ರಾಜ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಸಿನಿಮಾಗಾಗಿ ವಿನಯ್ ಹತ್ತು ವಿಭಿನ್ನ  ಲುಕ್ ಗಳಲ್ಲಿ ಫೋಟೋ ಶೂಟ್ ಮಾಡಿದ್ದಾರೆ.

ಸಿನಿಮಾವನ್ನು ರಘು ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಮನೋಹರ್  ಜೋಷಿ  ಛಾಯಾಗ್ರಹಣ ಸಿನಿಮಾಕ್ಕಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಲಿದ್ದಾರೆ. ಸಿನಿಮಾದಲ್ಲಿ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ರೋಮ್ಯಾಂಟಿಕ್ ಹಾಡೊಂದನ್ನು ಹಾಡಲಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಎರಡು ದಿನ ಶೂಟಿಂಗ್ ನಡೆಸಲಿರುವ ಸಿನಿಮಾ ತಂಡ ಜನವರಿ 14 ರ ವೇಳೆಗೆ ಮೊದಲ ಹಂತದ ಶೂಟಿಂಗ್ ಮುಗಿಸಲಿದೆ.

Share this Story:

Follow Webdunia kannada