Webdunia - Bharat's app for daily news and videos

Install App

ನನ್ನ ಸಂಭಾವನೆ ಕುರಿತಂತೆ ಹಬ್ಬಿರುವ ಸುಳ್ಳು ಸುದ್ದಿ ನಂಬದಿರಿ -ರಜನಿಕಾಂತ್

Webdunia
ಮಂಗಳವಾರ, 18 ನವೆಂಬರ್ 2014 (13:26 IST)
ದಕ್ಷಿಣ ಭಾರತದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಚಿತ್ರ ರಜನಿಕಾಂತ್ ಅವರ ಅಭಿನಯದ ಲಿಂಗಾ. ಈ ಚಿತ್ರದಲ್ಲಿ ರಜನಿಕಾಂತ್  ನಟಿಸಿರುವ ಸಂಗತಿಯೇ ಕ್ರೇಜ್ ಉಂಟು ಮಾಡಿದೆ ಎಂದೇ ಹೇಳಬಹುದಾಗಿದೆ.
 
 ಸಿನಿಮಾ ರಜನಿ ಅವರ ಬರ್ತ್‌ಡೇ ದಿನದಂದು ಬಿಡುಗಡೆ ಆಗುತ್ತಿದೆ. ಅವರ ಲಿಂಗಾ ಚಿತ್ರ ಬಾಕ್ಸಾಫೀಸನ್ನು ಅಲುಗಾಡಿಸುವುದು ಖಾಯಂ ಎನ್ನುವ ಲೆಕ್ಕಾಚಾರ ಹಾಕಿದ್ದರೆ ಕಾಲಿವುಡ್ ಚಿತ್ರ ಪಂಡಿತರು. ಇದರಲ್ಲಿ ಯಾವುದೇ ರೀತಿಯ ಉತ್ಪ್ರೇಕ್ಷೆ ಇಲ್ಲ. ಆದರೆ ಈಗ ನಾವು ಹೇಳುತ್ತಿರುವ ಸಂಗತಿ ಇದಲ್ಲ. ರಜನಿ ತಾವು ನಟಿಸುವ ಚಿತ್ರಗಳಿಂದಲೂ  ಪಡೆಯುವ ಸಂಭಾವನೆ ಅಧಿಕ ಮೊತ್ತದಲ್ಲಿ ಇರುತ್ತದೆ ಎನ್ನುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. 
 
ಇದಕ್ಕೆ ಸಂಬಂಧಪಟ್ಟಂತೆ ಲಿಂಗಾ ಚಿತ್ರಕ್ಕೂ ಸಹಿತ ಅವರು ಭಾರಿ ಮೊತ್ತದ ಹಣ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಅವರು ಅದೆಷ್ಟರ ಮಟ್ಟಿಗೆ ಹಣ ಪಡೆದಿರಬಹುದು ಎನ್ನುವ ಬಗ್ಗೆ ಸ್ಪಷ್ಟನೆ ಇರಲಿಲ್ಲ. ಸುದ್ದಿ ಒಂದರ ಪ್ರಕಾರ ರಜನಿಕಾಂತ್ ಅವರು ಈ ಚಿತ್ರದ ನಟನೆಗೆಂದು 65  ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆದಿದ್ದಾರೆ. 
 
ಆದರೆ ಈ ಬಗ್ಗೆ ರಜನಿ ಕಾಂತ್ ಸ್ಪಷ್ಟನೆ ನೀಡಿದ್ದು ತಾನು ಈ ಚಿತ್ರದ ಅಭಿನಯಕ್ಕೆ ಪಡೆದ ಮೊತ್ತ 35 ಕೋಟಿಗಳು ಎಂದು ಹೇಳಿದ್ದಾರೆ. ಆದರೆ ಹೊರಗೆ ಮಾತ್ರ 65 ಕೋಟಿ  ಶಬ್ದ ಕೇಳಿ ಬರುತ್ತಿದೆ. ಈ ಸುದ್ದಿ ಸತ್ಯವಲ್ಲ, ನಂಬದಿರಿ ಎಂದು ಹೇಳಿದ್ದಲ್ಲದೆ, ತಾನು ಪಡೆದ ಸಂಭಾವನೆ ನಿರ್ಮಾಪಕರಿಗೆ  ತೊಂದರೆ ಆಗುವಂತೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 
 
ಈ ಚಿತ್ರವನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈರೋಸ್ ವಿತರಣ ಸಂಸ್ಥೆಗೆ 125  ಕೋಟಿಗೆ ಮಾರಾಟ ಮಾಡಿದ್ದಾರೆ. ಕೆ ಎಸ್ ರವಿಕುಮಾರ್ ಅವರ ನಿರ್ದೇಶನದ ಈ ಚಿತ್ರದಲ್ಲಿ ರಜನಿ ಜೊತೆ ಸೋನಾಕ್ಷಿ ಸಿನ್ಹ ಮತ್ತು ಅನುಷ್ಕ ಶೆಟ್ಟಿ ನಟಿಸಿದ್ದಾರೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments