Select Your Language

Notifications

webdunia
webdunia
webdunia
webdunia

ರುದ್ರಮದೇವಿ ನಟನೆಗೆಂದು 30 ಬಾರಿ ಕಾಸ್ಟೂಂ ಬದಲಾಯಿಸಿದ ರಾಣ..

ರುದ್ರಮದೇವಿ ನಟನೆಗೆಂದು 30  ಬಾರಿ ಕಾಸ್ಟೂಂ ಬದಲಾಯಿಸಿದ ರಾಣ..
hyderabad , ಬುಧವಾರ, 26 ನವೆಂಬರ್ 2014 (12:47 IST)
ಐತಿಹಾಸಿಕ ಚಿತ್ರಗಳು ಎಂದರೆ ಸುಲಭದ ಸಂಗತಿಯಲ್ಲ. ಏಕೆಂದರೆ ಅದಕ್ಕೆಂದು ಸಾಕಷ್ಟು ಕಷ್ಟ ಪಡ ಬೇಕು ನಟನಟಿಯರು. ವಿಶೇಷವಾದ ಆಂಗಿಕ ಶೈಲಿ ,ಅದಕ್ಕೆ ಪೂರಕ ಅಂಶಗಳು ಹೀಗೆ ಹತ್ತು ಹಲವಾರು ಸಂಗತಿಗಳು. ರಾಣಿ ರುದ್ರಮ ದೇವಿ ಚಿತ್ರಕ್ಕೆಂದು ನಟಿ ಅನುಷ್ಕ ಸಾಕಷ್ಟು ಕಷ್ಟ ಪಟ್ಟಿದ್ದಾಳೆ. 
 
ತನ್ನ ಪಾತ್ರದ ಜೀವಂತಿಕೆಗೆಂದು ಆಕೆ ಬಹಳಷ್ಟು ಪ್ರಯತ್ನಗಳನ್ನು ಮಾಡಿದ್ದಾಳೆ. ಅದೇ ರೀತಿ ಆಕೆಯ ಪಾತ್ರದಷ್ಟೇ ಪ್ರಧಾನ ಆಗಿರುವ ಚಾಲುಕ್ಯ ಅರಸ ವೀರಭದ್ರ ಪಾತ್ರದಲ್ಲಿ ನಟ ರಾಣ ನಟಿಸಿದ್ದಾರೆ. ರಾಣ ಸಹ ಕಷ್ಟ ಪಡುವ ವಿಷಯದಲ್ಲಿ ಹಿಂದೆ ಉಳಿದಿಲ್ಲ ಎಂದೇ ಹೇಳ ಬಹುದಾಗಿದೆ. 
 
13ನೇ ಶತಮಾನದ  ಚಾಲುಕ್ಯ ಅರಸ ವೀರಭದ್ರ  ಬಗ್ಗೆ ಇರುವ ಚಾರಿತ್ರಿಕ ಅಂಶಗಳನ್ನು ತಿಳಿಯಲು ರಾಣ ಖುದ್ದು  ನಿಡದವೋಲುಗೆ ಹೋಗಿ ಅಲ್ಲಿರುವ ಇತಿಹಾಸಕಾರರ ಬಳಿ ವೀರಭದ್ರ ದೊರೆಯ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದರಂತೆ. ನಿಡವಾರಾಧ್ಯಪುರಂ  ಎಂದು ಇಂದಿನ ನಿಡದ ವೋಲುನ್ನು ಕರೆಯುತ್ತಾರೆಂದು, ವೀರಭದ್ರ ಅಲ್ಲಿನ ದೊರೆಯಾಗಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. 
 
ರುದ್ರಮದೇವಿಯಲ್ಲಿ ಚಾಲುಕ್ಯ ವೀರಭದ್ರ  ರುದ್ರಮದೇವಿಯನ್ನು ಪ್ರೇಯಸಿಯಾಗಿ ಆರಾಧಿಸುವ ಓರ್ವ ಭಗ್ನ ಪ್ರೇಮಿ ಎಂದು ಕಥೆಗಳಲ್ಲಿದೆ. ರುದ್ರಮದೇವಿ ಕಾಕತೀಯ ಸಾಮ್ರಾಜ್ಯ  ವಿಸ್ತರಣೆಯಲ್ಲಿ ವೀರಭದ್ರ ಪಾತ್ರ ಹೆಚ್ಚು ಪ್ರಾಮುಖ್ಯತೆ ಗಳಿಸಿದೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ತನ್ನ ಪಾತ್ರಕ್ಕಿರುವ ಪ್ರಾಮುಖ್ಯತೆ ಅರಿತ ರಾಣ ಅದಕ್ಕೆ ಪೂರಕ ಸಿದ್ಧತೆ ಮಾಡಿಕೊಂಡರಂತೆ. ಡೈಲಾಗ್ ಗಳ ಉಚ್ಚಾರಣೆ ಅತ್ಯಂತ ತ್ರಾಸದಾಯಕ ಆಗಿದ್ದರು ಸಹಿತ ಹಿಂಜರಿಯದೆ ಶ್ರಮವಹಿಸಿ ಕಲಿತರಂತೆ.
 
ಅಷ್ಟೇ ಅಲ್ಲದೆ 30 ಬಾರಿ ತನ್ನ ಗೆಟಪ್ ಬದಲಾಯಿಸಿಕೊಂಡು ಅಂದಿನ ಕಾಸ್ಟೂಂ ಬಗ್ಗೆ ರಿಸರ್ಚ್ ಮಾಡಿ ಬಳಸಿದರಂತೆ. ಒಟ್ಟಾರೆ ರಾಣ ಅವರ ಶ್ರಮವನ್ನು ಜನರು ಮೆಚ್ಚಿ ಹರಿಸಬೇಕು. ಹಾಗೆ ಆಗಲಿ ಎನ್ನುವ ಹಾರೈಕೆ ನಮ್ಮದು. 
 
 

Share this Story:

Follow Webdunia kannada